ರಥವೇರಿ ಬಂದ ನಂಜುಂಡನ ಪಂಚ ಮಹಾ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಬಾಗಿ
ಸಂಜೆವಾಣಿ ನ್ಯೂಸ್
ನಂಜನಗೂಡು:ಮಾ.22:- ನಂಜನಗೂಡು ದಕ್ಷಿಣ ಕಾಶಿ ಗರಳ ಪುರಿ ಕ್ಷೇತ್ರ 5 ರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆನಿಸಿರುವ ನಂಜನಗೂಡಿನಲ್ಲಿಂದು ಗೌತಮ ಪಂಚ ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆದು ನಾಡಿ ನಾದ್ಯಂತ ಆಗಮಿಸಿದ ಲಕ್ಷಾಂತರ ಭಕ್ತರು ಈ ನಯನ ಮನೋಹರ ದೃಶ್ಯವನ್ನು ಕಂಡು ಪರಾಮಸರಾದರು.
ಬೆಳಿಗ್ಗೆ 6:30 ರಿಂದ 650ಗಂಟೆ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ರವರ ನೇತೃತ್ವದಲ್ಲಿ ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಸಕಲ ಪೂಜಾ ಕಾರ್ಯಗಳು ನಡೆದು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಗೌತಮ ರಥಕ್ಕೆ ಮಹಾಮಂಗಳಾರತಿ ನೆರವೇರಿಸಿ ಚಾಲನೆ ನೀಡಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ್ ಪ್ರಥಮ ಬಾರಿಗೆ ಶಾಸಕರಾಗಿ ರಥೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ಚಾಲನೆ ನೀಡಿದರು.
ನಾಡಿ ನಾದ್ಯಂತ ಬಂದಿದ್ದ ಲಕ್ಷಾಂತರ ಭಕ್ತರು ಈ ಕ್ಷಣಕ್ಕಾಗಿ ಬಾರಿ ಕಾತರದಿಂದ ಕಾಯುತ್ತಿದ್ದು ಜೈ ಶ್ರೀಕಂಠ ಜೈ ನಂಜುಂಡ ಹರ ಹರ ಮಹಾದೇವ ಎಂಬ ಘೋಷಣೆಗಳೊಂದಿಗೆ ರಥಕ್ಕೆ ಎರಡು ಕಡೆ ಕಟ್ಟಿದ ಬಾರಿ ಗಾತ್ರದ ಹಗ್ಗಗಳನ್ನು ಎಳೆಯುತ್ತ ರಥ ಎಳೆಯಲು ಪ್ರಾರಂಭಿಸಿದರು ಶ್ರೀ ಗಣಪತಿ ರಥ ನಂತರ ಶ್ರೀ ಸುಬ್ರಮಣೇಶ್ವರ ಶ್ರೀಕಂಠೇಶ್ವರ ಸ್ವಾಮಿಯವರು ಶ್ರೀ ಪಾರ್ವತಮ್ಮನವರು ಶ್ರೀ ಚಂಡಿಕೇಶ್ವರ ಸ್ವಾಮಿಯವರು ರಥವನ್ನು ಎಳೆಯಲಾಯಿತು.
ರಥ ಚಲಿಸಲಾರಂಭಿಸಿದಾಗ ಲಕ್ಷಾಂತರ ಭಕ್ತಾದಿಗಳು ಮತ್ತು ನವಜೋಡಿಗಳು ರಥಗಳಿಗೆ ಹಣ್ಣು ದವನ ಅರ್ಪಿಸಿ ತಮ್ಮ ಹರಿಕೆ ನೆರವೇರಿಸಿದ. ಜಾತ್ರೆಯ ಪ್ರಯುಕ್ತ ಜಾತ್ರೆಯ ಇಂದಿನ ರಾತ್ರಿ ಮತ್ತು ಬೆಳಗ್ಗೆ ಅನೇಕ ಸಂಘ ಸಂಸ್ಥೆಗಳು ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು ನೀರು ಮಜ್ಜಿಗೆ ಪಾನಕ ಹಣ್ಣುಗಳು ಕುಡಿಯಲು ನೀರಿನ ಬಾಟಲ್ ಗಳು ಮತ್ತು ಲಾಡು ಸೇರಿದಂತೆ ಅನೇಕ ಪ್ರಸಾದಗಳನ್ನು ನೀಡಿದರು.
ದೇವಾಲಯಕ್ಕೆ ಬಂದಂತ ಭಕ್ತಾದಿಗಳು ಬೆಳಗಿನ ಜಾವದಲ್ಲೇ ಕಪಿಲಾ ನದಿಯಲ್ಲಿ ಮಿಂದು ಶ್ರೀ ಶ್ರೀಕಂಠೇಶ್ವರ ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ದೂಪದ ಸೇವೆ ಮುಡಿಸೇವೆ ಸಲ್ಲಿಸಿದರು.
ಪಂಚ ರಥಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ನಾನಾ ರೀತಿ ಹೂಗಳಿಂದ ಮಾವಿನ ಸೊಪ್ಪು ಬಾಳೆಕಂದು ಕಟ್ಟಿ ಸಿಂಗರಿಸಲಾಗಿತ್ತು ಅದೇ ರೀತಿ ದೇವಾಲಯಕ್ಕೆಲ್ಲ ಲೈಟಿಂಗ್ ವ್ಯವಸ್ಥೆ ಮಾಡಿ ನೋಡುಗರ ಗಮನ ಸೆಳೆಯಿತು ಮತ್ತು ಪೆÇಲೀಸ್ ಇಲಾಖೆ ವತಿಯಿಂದ ಪೂರ್ಣ ಬಂಧುಬಾಸ್ತ್ ವ್ಯವಸ್ಥೆ ರಥಗಳು ಚಲಿಸುವ ರಥದ ಬೀದಿಗಳಲ್ಲಿ ಪೆÇಲೀಸ್ ಬಂದು ಬಸ್ತ್ ಮಾಡಲಾಗಿತ್ತು ಮತ್ತು ರಥದ ಬೀದಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು ಒಟ್ಟಾರೆ ಈ ಬಾರಿ ದೊಡ್ಡ ಜಾತ್ರೆ ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಂಚ ರಥಗಳು ತಮ್ಮ ಸರಿಯಾದ ಸಮಯಕ್ಕೆ ಸ್ವಸ್ಥಾನ ತಲುಪಿದೆವು. ಈ ಬಾರಿ ನಿರೀಕ್ಷೆಗೂ ಮೀರಿ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.