ಅಪರೋಕ್ಷ ಜ್ಞಾನದಿಂದ ಭಗವಂತನ ದರ್ಶನ
ಕಲಬುರಗಿ,ಮಾ.21: ಸನಾತನ ಪರಂಪರೆಗೆ ವೇದಗಳು ಪೂರಕವಾಗಿವೆ.ರಾಮಾಯಣ ಮತ್ತು ಮಹಾಭಾರತ ಪ್ರಾಮಾಣ್ಯ ಗ್ರಂಥವಾಗಿವೆ ಎಂದು ಪಂ. ಡಾ. ಗುರುಮಧ್ವಾಚಾರ್ಯ ನವಲಿ ಹೇಳಿದರು.
ಜೇವರ್ಗಿ ಕಾಲೋನಿಯ ರಾಯರ ಮಠದಲ್ಲಿ ವ್ಯಾಸ ಸಾಹಿತ್ಯ ವಿಚಾರ ವಾಹಿನಿಯು ಆಯೋಜಿಸಿದ್ದ ವಿಚಾರ ಸಂಕೀರ್ತನೆಯಲ್ಲಿ ಸುಂದರ ಕಾಂಡ ಕುರಿತು ಪ್ರವಚನ ನೀಡಿದರು. ಅಪರೋಕ್ಷ ಜ್ಞಾನ ಪಡೆದಾಗ ಮಾತ್ರ ಭಗವಂತನ ದÀರ್ಶನವಾಗುತ್ತದೆ ಎಂದರು.ಕಲಬುರಗಿ ಪ್ರಾಂತ ಕೂಡ ಶ್ರೀರಾಮನ ಪಾದ ಸ್ಪರ್ಷದಿಂದ ಪಾವನವಾದ ಪುಣ್ಯಭೂಮಿಯಾಗಿದೆ ಎಂದರು.ಕಿಷ್ಕಿಂದಾ ಪಟ್ಟಣಕ್ಕೆ ಬಂದಾಗ ಅಲ್ಲಿ ಹನುಮಂತನಿಗೆ ರಾಮನ ಭೇಟಿ ಆಗುತ್ತದೆ.ಹನುಮಂತ ಮಹೇಂದ್ರ ಪರ್ವತದಿಂದ ಸಮುದ್ರ ಉಲ್ಲಂಘನೆ ಮಾಡುವ ಪ್ರಸಂಗದಿಂದ ಸುಂದರಕಾಂಡ ಶುರುವಾಗುತ್ತದೆ.ಸೀತೆಯನ್ನು ಭೇಟಿಯಾಗಿ ರಾಮನಿಗೆ ಸೀತೆಯ ಇರುವಿಕೆಯ ವಾರ್ತೆಯನ್ನು ತರುವ ಕಾಂಡವೇ ಸುಂದರ ಕಾಂಡ.ನನಗೆ ಸಮುದ್ರ ಹಾರುವ ಶಕ್ತಿಇದೆ ಎಂದು ಹನುಮಂತ ಹೇಳಲಿಲ್ಲ. ಭಗವಂತನ ಅನುಗ್ರಹದಿಂದ ನಾನು ಸಮುದ್ರ ಹಾರಬಲ್ಲೆ ಎಂದು ಹೇಳುವ ಮೂಲಕ ಪರಮಾತ್ಮನ ಅಸ್ತಿತ್ವ ತೋರಿಸಿಕೊಟ್ಟಿದ್ದಾನೆ ಎಂದರು.
ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ಭೋಜನ ಪದ್ಧತಿ ಬಗ್ಗೆ ಮಾತನಾಡಿದರು.ಭೋಜನ ಪದ್ಧತಿ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ನರೇಂದ್ರ ಫಿರೋಜಾಬಾದಕರ ಮಾತನಾಡಿದರು.
ವಾಹಿನಿ ಸಂಚಾಲಕ ರವಿ ಲಾತೂರಕರ ನಿರೂಪಿಸಿದರು.ಪದ್ಮನಾಭಾಚಾರ್ಯ ಜೋಶಿ, ರಾಮಾಚಾರ್ಯ ಮೊಗರೆ, ರಾಘವೇಂದ್ರ ರಾವ್ ದೇಶಮುಖ, ಸುರೇಶ್ ಕುಲಕರ್ಣಿ,ರವಿ ಜೋಶಿ, ನರಸಿಂಗರಾವ್ ಕುಲಕರ್ಣಿ,ಗುರುರಾಜ್ ದೇಸಾಯಿ, ಜಗನ್ನಾಥ ಸಗರ್, ಡಾ ರವಿ ಕುಲಕರ್ಣಿ,ಎನ್.ವಿ ಕುಲಕರ್ಣಿ,ಬದರಿ ಬಾಡಗಿ ,ಗೋಪಿ ಅಧ್ಯಾಪಕ ಹಾಗೂ ನಗರದ ವಿವಿಧ ಪಾರಾಯಣ ಸಂಘದ ಸದಸ್ಯರು ಉಪಸ್ಥಿತರಿದ್ದರು.