ಸಿಂದಗಿ ನಾಕಾ ಚೆಕ್‍ಪೋಸ್ಟ್‍ಗೆ ಡಿಸಿ ಭೇಟಿ
ವಿಜಯಪುರ,ಮಾ.21: ಲೋಕಸಭಾ ಚುನಾವಣಾ ಪ್ರಯುಕ್ತ ನಗರದ ಸಿಂದಗಿ ನಾಕಾ ಬಳಿ ತೆರೆಯಲಾಗಿರುವ ಚೆಕ್ ಪೆÇೀಸ್ಟ್‍ಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಕ್ ಫೆÇೀಸ್ಟಿಗೆ ಭೇಟಿ ನೀಡಿ, ಹೊರ ಹೋಗುವ ಒಳಬರುವ ಎಲ್ಲಾ ವಾಹನಗಳ ತಪಾಸಣಾ ಕಾರ್ಯ ವೀಕ್ಷಿಸಿ, ಚುನಾವಣೆ ನಿಮಿತ್ತ ಚೆಕ್‍ಫೆÇೀಸ್ಟಿನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕು. ಬೇಸಿಗೆ ಇರುವುದರಿಂದ ಚೆಕ್ ಫೆÇೀಸ್ಟಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಿದೆ. ಎಲ್ಲಾ ವಾಹನಗಳ ಬಗ್ಗೆ ನಿಗಾ ವಹಿಸಿ ಬಹು ಜವಾಬ್ದಾರಿಯಿಂದ ಸಮನ್ವಯತದ ಮೂಲಕ ಕಾರ್ಯ ನಿರ್ವಹಿಸಬೇಕು ಎಂದು ನಿಯೋಜಿಸಿದ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.