47ದೇಶಗಳಲ್ಲಿ ಈಶ್ವರಿಯ ಧ್ಯಾನ ನಡೆಯುತ್ತಿದೆ:ಬಿ.ಕೆ.ಸುವರ್ಣಾ
ತಾಳಿಕೋಟೆ:ಮಾ.21: ತಾಳಿಕೋಟೆಯಲ್ಲಿ ಈಶ್ವರಿ ವಿಶ್ವವಿದ್ಯಾಲಯವು ಕಳೆದ 36 ವರ್ಷಗಳಿಂದ ಸತತ ಶಿವಸಂದೇಶ, ಶಾಂತಿಯ ಸಂದೇಶವನ್ನು ಭಕ್ತ ಸಮೂಹಕ್ಕೆ ತಿಳಿಸುತ್ತಾ ನಡೆದಿದೆ ಈಶ್ವರನೇ ದಿವ್ಯ ಶಕ್ತಿಯಾಗಿ ಮಾನವನನ್ನು ಮಹಾ ಮಾನವನನ್ನಾಗಿ ಮಾಡುವ ಕಾರ್ಯ ನಡೆಸಿದ್ದಾನೆಂದು ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ.ಕೆ.ಸುವರ್ಣ ಅಕ್ಕನವರು ನುಡಿದರು.
ಸ್ಥಳೀಯ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಪುರಾಣ ಪ್ರವಚನದ ಸಾರನ್ನು ನೀಡುತ್ತಾ ಸಾಗಿದ ಮಸೂತಿಯ ಪ್ರವಚನಕಾರರಾದ ಶ್ರೀ ಡಾ.ಶಿವಲಿಂಗಯ್ಯ ಶರಣರ ಅವರಿಗೆ ತಮ್ಮ ವಿದ್ಯಾಲಯದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಮಾತನಾಡುತ್ತಿದ್ದ ಅವರು 1932ನೇ ಸಾಲಿನಿಂದ ಈ ಈಶ್ವರಿ ವಿಶ್ವ ವಿದ್ಯಾಲಯಗಳು ಪ್ರಾರಂಭಗೊಂಡಿವೆ 47ದೇಶಗಳಲ್ಲಿ ಈಶ್ವರಿಯ ದ್ಯಾನ ಶಿವ ಸಂದೇಶ ನೀಡಲಾಗುತ್ತಿದೆ ಎಂದರು. ಈ ಸಂದೇಶವನ್ನು ಕೇಳಲು ಶಿವ ಪುತ್ರ, ಶಿವಪುತ್ರಿಯರು ತಯಾರ ಆಗಿಯೇ ಇರುತ್ತಾರೆ ದಾದಾ ಎಂಬುವರು ಈ ಕಾರ್ಯವನ್ನು ನಡೆಸಿಕೊಂಡು ಬಂದರು. ಈ ವಿದ್ಯಾಲಯಗಳಲ್ಲಿಯ ಕೇಂದ್ರದಲ್ಲಿಯ ಹಿತ ನುಡಿಗಳನ್ನು ಅನೇಕ ಜನರು ಕೇಳುತ್ತಾ ಸಾಗಿದ್ದಾರೆಂದರು. ಮನುಷ್ಯನಲ್ಲಿ ದುಃಖ ಬಂದಾಗ ಅದನ್ನು ನಿವಾರಣೆ ಮಾಡಿಕೊಳ್ಳಲು ಸುಖಃ ಶಾಂತಿಗೆ ಮುಂದಾಗುತ್ತಾರೆ ಪರಮಾತ್ಮ ನೆನದವರ ಮನೆಯಲ್ಲಿ ಬರಬೇಕಾಗುತ್ತದೆ ಆ ಶಿವನನ್ನು ಮನಸ್ಸಿನಿಂದ ದ್ಯಾನದಿಂದ ತಿಳುವಳಿಕೆಯಿಂದ ಪರಮಾತ್ಮನನ್ನು ನೋಡಲು ಸಾದ್ಯವೆಂದರು.
ಅಂತರಾತ್ಮದ ತಂದೆಯೇ ಪರಮಾತ್ಮನಾಗಿದ್ದು ನಮ್ಮ ಜನ್ಮದ ಆತ್ಮ ಪರಮಾತ್ಮ ಯಾವ ರೀತಿ ಸ್ಥಾನಮಾನ ನೀಡಿದ್ದಾನೆ ಹಾಗೆ ಪರಮಾತ್ಮನಿಗೆ ನಾವು ದೈವಿಗುಣಗಳನ್ನು ಪಡೆದುಕೊಳ್ಳಲು ಅಹ್ವಾನಿಸಿದಾಗ ಆತ ಧರೆಗೆ ಬರಲೇ ಬೇಕಾಗುತ್ತದೆ ಈ ಕುರಿತು ಮೌಂಟ್ ಅಭೌದಲ್ಲಿ ಪರಮಾತ್ಮ ಬಂದು ನೋಡುತ್ತಾ ಇರುವದು ಪ್ರತ್ಯಕ್ಷ ಕಾಣಬಹುದಾಗಿದೆ ಎಂದರು. ಶಿವನ ಸ್ವರೂಪಿ ಜ್ಯೋತಿರ ಲಿಂಗಕ್ಕೆ ಹೋಲಿಸಲಾಗಿದೆ ನಮ್ಮ ಆತ್ಮವನ್ನು ಪರಮಾತ್ಮನಿಗೆ ಹೋಲಿಸಲಾಗುತ್ತದೆ ತಂದೆ ತಾಯಿಯಂತೆ ಎಲ್ಲರಿಗೂ ಕರುಣೆ ತೋರುತ್ತಾನೆ ಶಿವ ಆಗಮಿಸಿ 88 ವರ್ಷಗಳು ಆದರೂ ಇನ್ನೂ 10 ವರ್ಷಗಳಲ್ಲಿ ಹೋಗುತ್ತಾನೆ ನಾವು ಈ ಸಂಬಂದವನ್ನು ಕಳೆದುಕೊಳ್ಳುವದು ಬೇಡಾ ಕಾರಣ ಅಜ್ಞಾನದಿಂದ ಏಚ್ಚೆತ್ತುಕೊಳ್ಳಬೇಕಾಗಿದೆ ಎಂದು. ಜ್ಞಾನವನ್ನು ಅರ್ಥಮಾಡಿಕೊಂಡು ಬೆಳಕಿಗೆ ಬರಬೇಕಾಗಿದೆ ಶರಣರು ಸಂತರು ಪ್ರವಾದಿಗಳು ಸಂದೇಶ ಸಾರಿರುವದು ಪರಮಾತ್ಮ ಇದ್ದಾನೆಂಬುದನ್ನು ಕೇಳಿದ್ದೇವೆ ಪರಮಾತ್ಮನ ಮಹಿಮೆಗಳಿವೆ ಕರ್ತವ್ಯಗಳಿವೆ ಅದಕ್ಕಾಗಿ ಅವನು ಬಂದಿದ್ದಾನೆ ಕಲಿಯುಗ ನಾಶವಾಗಿ ಜನ್ಮ ಬರುತ್ತದೆ ದ್ವಾಪಾರಯುಗ, ಕಲಿಯುಗ ಎಂಬವುಗಳು ಬರಲೇಬೇಕೆಂದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಪುರಾಣ ಪ್ರವಚನಕಾರ ಶ್ರೀ ಡಾ.ಶಿವಲಿಂಗಯ್ಯ ಶರಣರ, ಬಿ.ಕೆ.ಬಸವರಾಜ, ಕಾಶಿಬಾಯಿ ಅಜ್ಜಿ, ಗೀತಾಬಾಯಿ ಉಭಾಳೆ, ಸುಮಾ ಆಲ್ಯಾಳ, ಕಾಶಿಬಾಯಿ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಶ್ರೀ ಶರಣರ ಮಠದ ವತಿಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ.ಕೆ.ಸುವರ್ಣಾ ಅಕ್ಕನವರಿಗೆ ಶ್ರೀಮತಿ ಕಾಶಿಬಾಯಿ ಶರಣರ ಅವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.