ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಪಿಡಿಒ ರವಿ
ಸೇಡಂ, ಮಾ, 21: ಪಾಲಕರು ತಮ್ಮ ಮಕ್ಕಳನ್ನು ಹುಟ್ಟಿನಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೆಲಸಕ್ಕೆ ಕಳುಹಿಸದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು ಎಂದು ಮಳಖೇಡ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವಿ ಎಮ್ ಸಂದಾನಿ ಹೇಳಿದರು.
ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಕಾನೂನು ಸೇವಾ ಸಮಿತಿ ಚಿತ್ತಾಪುರ ತಾಲೂಕು ನ್ಯಾಯವಾದಿಗಳ ಸಂಘ ಚಿತ್ತಾಪುರ ಮತ್ತು ಕಾರ್ಮಿಕ ಇಲಾಖೆ ಕಲಬುರ್ಗಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಲಬುರ್ಗಿ ಮತ್ತು ಬಂಜಾರ ಯುವಕ ಸಂಘ ಚೌಕಿತಾಂಡಾ ಚಿತ್ತಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಯೋಜನೆಯಡಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ( ನಿಷೇಧ ಮತ್ತು ನಿಯಂತ್ರಣ). ಕಾಯ್ದೆ 1988 ತಿದ್ದುಪಡಿ 2016 ರೈ ಕುರಿತು ಕಾನೂನು ಅರಿವು ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಪಾಲಕರಿಗೆ ಮುಂಬರುವ ದಿನಗಳಲ್ಲಿ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ವಿದ್ಯಾವಂತರಾಗಿ ಉದ್ಯೋಗದಲ್ಲಿ ತೊಡಗಿ ನಿಮ್ಮ ಮುಪ್ಪಿನ ಕಾಲಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯದ ಮೇಲ್ವಿಚಾರಕಿ ಭಾಗ್ಯಶ್ರೀ, ಮುಖ್ಯ ಅತಿಥಿಗಳಾಗಿ ರಾಷ್ಟ್ರ ಯುವ ಪ್ರಶಸ್ತಿ ವಿಜೇತರು ಹಾಗೂ ಬಂಜಾರ ಯುವಕರ ಸಂಘದ ಅಧ್ಯಕ್ಷರಾದ ಶ್ರೀ ಪಿ ಆರ್ ಪಾಂಡು ಹಾಗೂ ಉಪನ್ಯಾಸಕರಾಗಿ ಮಲ್ಲಿಕಾರ್ಜುನ ಹೊನಗುಂಟ, ಸಂಜೆವಾಣಿ ವರದಿಗಾರ ಬಿಜನಳ್ಳಿ ಸುರೇಶ್ ಉಪಸ್ಥಿತರಿದ್ದರು. ಈ ವೇಳೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಇದ್ದರು.