ಗಣೇಶ್ ಮೂರ್ತಿ ಅದ್ದೂರಿ ವಿಸರ್ಜನೆ
ಇಂಡಿ,ಸೆ.೧೮-ಭಗತ್ ಸಿಂಗ್ ಸೇನಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಶಿರಗೂರ ಗ್ರಾಮದ ಗಣೇಶ್ ವಿಗ್ರಹವನ್ನು ಸೋಮವಾರ ಸಂಜೆ ಅದ್ದೂರಿಯಾಗಿ ಅಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು.
ಎಸ್‌ಆರ್‌ಎಸ್ ಡಿಜೆ ಸೌಂಡ್ ಸಿಸ್ಟಮ್ ನ ಮೂಲಕ ರೇಣುಕಾ ಎಲ್ಲಮ್ಮ ದೇವಸ್ಥಾನದಿಂದ ಆರಂಭಗೊAಡ ಮೆರವಣಿಗೆ ಬಡಾವಣೆ ರಸ್ತೆ ಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿತು.
ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಶಾಲಾ ಮಕ್ಕಳಿಂದ ಕೋಲಾಟ ಕುಣಿಸುವ, ಯುವಕರು, ವಯಸ್ಕರು, ಮಹಿಳೆಯರು, ಹಾಡಿಗೆ ಹೆಜ್ಜೆ ಹಾಕಿದರು.
ಗಣೇಶ್ ವಿಸರ್ಜನೆಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಭಾಗವಹಿಸುವ ಮೂಲಕ ವಿವಿಧ ಗೀತೆಗಳು, ಗಣೇಶ್ ಸ್ಮರಣೆ, ಗಣೇಶನ ಜಯ ಘೋಷಣೆ ಹಾಕುತ್ತ ಕುಣಿದು ಕುಪ್ಪಳಿಸಿದರು.
ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಜನ ಒಂದಡೆಯಾದರೆ, ಗಣೇಶ್ ವಿಸರ್ಜನೆಯ ಅವಿಸ್ಮರಣಿಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ಗಣೇಶ್ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.
ಬೇರೆ ಬೇರೆ ಊರುಗಳಿಂದ ಆಗಮಿಸಿದ ಸಾವಿರಾರು ಜನರು ಮನೆ, ಅಂಗಡಿ ಸೇರಿದಂತೆ ಕಟ್ಟಡಗಳ ಮೇಲೆ ನಿಂತು ಗಣೇಶ್ ವಿಸರ್ಜನೆ ವೈಭವವನ್ನು ವೀಕ್ಷಿಸಿದರು.
೯ ದಿನಗಳ ನಂತರ ಗ್ರಾಮದ ಭೀಮಾ ನದಿಯಲ್ಲಿ ಗಣೇಶ್ ಮೂರ್ತಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಮಿತ್ ಕೋಳಿ, ಈರಣ್ಣ ನಾಯ್ಕೊಡಿ, ಸಿದ್ದರಾಮ ನಾಯ್ಕೋಡಿ, ಕುಮಾರ ಅಪ್ತಗೀರಿ, ದಾನೇಶ್ವರ್ ಕೇಗಾಂವ, ಸುದೀಪ್ ನಾಯ್ಕೋಡಿ, ಶ್ರೀಕಾಂತ್ ಕೇಗಾಂವ, ಅರವಿಂದ್ ನಾಯ್ಕೋಡಿ, ಶ್ರೀಕಾಂತ್ ನಾಯ್ಕೋಡಿ, ವಿಶ್ವನಾಥ್ ಹಡಪದ, ರಾಮಣ್ಣ ಹುಡೇದ್, ಅಶೋಕ್ ಗೋಡೆಕರ್, ಮಂಜುನಾಥ್ ಘಂಟೆ, ಸಿದ್ದರಾಯ್ ಕೇಗಾಂವ, ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಗಣೇಶ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಯಾವುದೇ ಹಿತಕರ ಘಟನೆ ನಡೆದಂತೆ ಗ್ರಾಮದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ನಾಯ್ಕೋಡಿ, ಅರ್ಜುನ್ ಕೋಳಿ, ಹನುಮಂತರಾಯ ಕೋಳಿ, ಯಲ್ಲಪ್ಪ ನಾಯ್ಕೋಡಿ, ಗಜಾನಂದ್ ಬಳೆಗಾರ, ನಿಂಗಪ್ಪ ನಾವದಗಿ, ಭೀಮಶಂಕರ್ ಸಿಂಧೆ ಗಣೇಶ ವಿಸರ್ಜನೆ ಮೆರವಣಿಗೆ ವಹಿಸಿ ಅತ್ಯಂತ ಮುತುವರ್ಜಿಯಿಂದ ಗಣೇಶ ವಿಸರ್ಜನೆಯನ್ನು ಶಾಂತಿಯುತವಾಗಿ ನಡೆಸಿಕೊಟ್ಟರು.