ಅಜಂತಾ ಸಾಂಸ್ಕೃತಿಕ ಅಕಾಡೆಮಿಯಿಂದ ಯೋಗ ರತ್ನ ಪ್ರಶಸ್ತಿ
ಬೆಂಗಳೂರು, ಸೆ. ೧೮-ಅಜಂತಾ ಅಂತರರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು. ಇದರ ೪೨ನೇ ವಾರ್ಷಿಕೋತ್ಸವ ಹಾಗೂ ಸಂಜೀವಿನಿ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರ ದೊಡ್ಡಬಳ್ಳಾಪುರ, ಇವರ ೩೪ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ” ಕೊಂಡಾಜಿ ಬಸಪ್ಪ “ಆಡಿಟೋರಿಯಂ ನಲ್ಲಿ ನಡೆದ “ಕರ್ನಾಟಕ ಟ್ಯಾಲೆಂಟ್ ಅವಾರ್ಡ್ ಹಾಗೂ “ಐ ಡಿ ವಾಯ್ ಯೋಗ ರತ್ನ” ಅವಾರ್ಡ್ ಕಾರ್ಯಕ್ರಮದಲ್ಲಿ ಕಮ್ಮಗೊಂಡನಹಳ್ಳಿಯ ಎನ್. ಬಿ. ಇ. ಟಿ. ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯ ಮಕ್ಕಳು ಯೋಗ, ಕರಾಟೆ,ಸಮೂಹ ಗಾಯನ ಮತ್ತು ಜನಪದ ನೃತ್ಯ ವೀರಗಾಸೆಯನ್ನು ಪ್ರದರ್ಶಿಸಿ ಸಭಿಕರ ಮನ ಸೂರೆಗೊಂಡರು.
ಕಾರ್ಯಕ್ರಮದಲ್ಲಿ ಗದುಗಿನ ಶಿವಾನಂದ ಯೋಗ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಹಿರೇಮಠ, ಎನ್‌ಬಿಇಟಿ ಕಾರ್ಯದರ್ಶಿ ಡಾ. ಡಿ. ಎನ್. ಹರಿದಾಸ.ಡಾ.ಪುಟ್ಟೇಗೌಡ, ಡಾ.ಜಿ.ರಾಮಕೃಷ್ಣ, ಎಮ್.ಮುನಿಕೃಷ್ಣಪ್ಪ, ಒ.ಬಿ.ಸುದರ್ಶನ, ಕೃಷ್ಣಮೂರ್ತಿ, ಬಿ.ವಿ,ಶ್ರೀ.ಬಿ.ಟಿ.ಮುನಿಯಪ್ಪ, ಗೀತಾ ಮುನಿಯಪ್ಪ, ಡಿ. ಗ್ರೇಸ್, ರಮಾದೇವಿ,ಕಾರ್ಯಕ್ರಮದ ಆಯೋಜಕ ಡಾ. ವಿಶ್ವ ಬಂಧು ನಾಗೇಶ ಮತ್ತು ಡಾ. ಲಕ್ಷ್ಮೀ.ಎನ್.ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು.