ಡಾ.ವಿಷ್ಣು ಹುಟ್ಟುಹಬ್ಬ ಆಚರಣೆ
ಕೆ.ಆರ್.ಪುರ, ಸೆ.೧೯- ಕದಂಬ ಡಾ.ವಿಷ್ಣು ಅಭಿಮಾನಿಗಳ ಬಳಗದ ವತಿಯಿಂದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಕ್ಷೇತ್ರದ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಮಾಜಿ ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ಬಿ.ವಿ.ಮಂಜುನಾಥ ಅವರು ಮಾತನಾಡಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವು ಸಮಾಜಮುಖಿಯಾಗಿ ಆಚರಣೆ ಮಾಡಲಾಯಿತು ಎಂದು ಹೇಳಿದರು.
ಮಹಾನ್ ನಟರ ನಡುವೆಯೂ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿಮಾನಿಗಳಿಗೆ ರಸದೌತನ ಉಣಬಡಿಸಿದ ಮಹಾನ್ ನಟ ಎಂದು ಸ್ಮರಿಸಿದರು.
ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿಮೆಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಗೊಳಿಸಲಾಗಿದ್ದು,ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಬ್ಬಣ್ಣ,ವೆಂಕಿ, ಮುನಿಸ್ವಾಮಣ್ಣ,ಚಂದ್ರಣ್ಣ, ಪ್ರಭು,ದಿಲೀಪ್,ಬಾಬು,ರವಿ ಇದ್ದರು.