ಅಪರಿಚಿತರಿಂದ ವಾಟ್ಸಪ್ ಗ್ರೂಪ್-ಅಧಿಕ ಲಾಭಾಂಶ ನಂಬಿ ೧೭ ಲಕ್ಷ ಕಳೆದುಕೊಂಡ ವ್ಯಕ್ತಿ!
ಉಡುಪಿ: ಜಿಲ್ಲೆಯಲ್ಲಿ ಸೈಬರ್ ಖದೀಮರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪರಿಚಿತರು ವಾಟ್ಸಪ್ ಗ್ರೂಪ್ ಮಾಡಿ ಅಧಿಕ ಲಾಭಾಂಶದ ಆಮಿಷವೊಡ್ಡಿ ೧೭ ಲಕ್ಷ ರೂಪಾಯಿ ವಂಚಿಸಿದ್ದಾರೆ.
ಸಂತ್ರಸ್ಥ ಅಶ್ವಿನ್ ಕಾಮತ್ ಬಿ (೪೨) ಕುಂಜಿಬೆಟ್ಟು ಇವರನ್ನು ಉಈSಐ-Seಛಿuಡಿiಣಥಿ oಜಿಜಿiಛಿiಚಿಟ Sಣoಛಿಞs-ಈ೧೦ ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದು ಈ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಂತರ ಅವರು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು ಅದರಂತೆ ದಿನಾಂಕ: ೧೩/೦೫/೨೦೨೪ ರಿಂದ ದಿನಾಂಕ: ೦೩/೦೬/೨೦೨೪ ರ ವರೆಗೆ ಆಪಾದಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ೧೭,೮೯,೦೦೧/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ.
ಅದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಅಇಓ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: ೬೮/೨೦೨೪ ಕಲಂ ೬೬ (ಡಿ) ಐ.ಟಿ. ಆಕ್ಟ ಮತ್ತು ೪೨೦ ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.