ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯ: ಡಾ. ಪ್ರಿಯಂಕಾ ಮಂಠಾಳೆ
ಬಸವಕಲ್ಯಾಣ : ಮಾ.21:ದೇಶದ ಪ್ರತಿ ರಂಗದಲ್ಲಿ ಇಂದು ಮಹಿಳೆ ಪ್ರವೇಶ ಮಾಡಿದ್ದಾಳೆ ಜನ ಸಂಖ್ಯೆ ಅರ್ಧದಷ್ಟಿರುವ ಮಹಿಳೇಯರು ಶಿಕ್ಷಣ, ಆರೋಗ್ಯ ಸರಕಾರಿ ಹುದ್ದೆ ದೇಶದ ಅತ್ಯುನತ ಹುದ್ದೆಗಳಾದ ಐಎಎಸ್, ಐಪಿಎಸ್, ಸೈನ್ಯೆ ವಿಜ್ಞಾನ ಮುಂತಾದ ಕಡೆ ಮಹಿಳೆಯರು ತುಂಬಾ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಮಹಿಳೆಯರ ಅಭಿವೃದ್ಧಿಯಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯೆವೆಂದು ಡಾ.ಪ್ರಿಯಂಕಾ ಮಂಠಾಳೆ ಸ್ತ್ರೀ ರೋಗ ತಜ್ಞರು ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಆರೋಗ್ಯ ಮತ್ತು ಶಿಕ್ಷಣದ ಕಡೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು ಅಂದಾಗ ಮಾತ್ರ ದೇಶದ ಪ್ರತಿರಂಗದಲ್ಲಿ ಪ್ರವೇಶ ಮಾಡಲು ಸಾಧ್ಯೆವಾಗುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಭಾಲ್ಕಿ ಸಿ.ಬಿ ಕಾಲೇಜಿನ ಉಪನ್ಯಾಸಕರು ಹಾಗೂ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಪ್ರೊ.ವಿಜಯಲಕ್ಷ್ಮೀ ಗಡ್ಡೆಯವರು ಮಾತನಾಡಿ ಮಹಿಳೆಯರು ಉದ್ಯೋಗ, ಶಿಕ್ಷಣ ಪಡೆದರು ಸಹ ಅನೇಕ ಸಂಧರ್ಭಗಳಲ್ಲಿ ಮಹಿಳೆಯರು ಕಿರುಕುಳ, ಬಲತ್ಕಾರ, ಅಸಮಾನತೆ ಸಂಧರ್ಭಗಳು ಎದುರಿಸಬೇಕಾಗಿದೆ ಕೌಟುಂಬಿಕ ಕಲಹಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಇದನ್ನು ತಡೆಗಟ್ಟುವಲ್ಲಿ ಅನೇಕ ಕಾಯ್ದೆ ಕಾನೂನುಗಳು ಸರಕಾರ ರಚಿಸಿದೆ ಅದರ ಸದುಪಯೋಗ ಪಡೆದುಕೊಳ್ಳಲು ಮಹಿಳೆಯರು ವಿದ್ಯಾವಂತರಾಗಲು ಮುಂದೆ ಬರಬೇಕು ಮತ್ತು ಸಂಘಟಿತರಾಗಿ ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಬಳಿರಾಮ ಹುಡೆ ರವರು ಮಾತನಾಡಿ ಒಂದು ಕಡೆ ಮಹಿಳೆ ದೇಶದ ಸವಮಾಜದ ಸರ್ವಾಂಗೀಣ ಶಕ್ತಿಯಾಗಿದ್ದಾರೆ ಅನೇಕ ರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಪ್ರತಿರಂಗದಲ್ಲೂ ಮಹಿಳೆ ಮುಂದೆವರುತ್ತಿದ್ದಾರೆ ಎಂಬ ಸಂತೋಷವಿದ್ದರೆ ಇನ್ನು ಅನೇಕ ವಿಷಯಗಳಲ್ಲಿ ಮಹಿಳೆ ಕಿರುಕುಳ ಅನುಭವಿಸುತಿದ್ದಾರೆ ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿ ವೇಶವಾಟಿಕೆ ಧಂಧೆಗಳು ನಿರಂತರವಾಗಿ ಬಲತ್ಕಾರದಂತಹ ಸಂಗತಿಗಳಿಗೆ ಬಲಿಯಾಗುತ್ತಿರುವ ದುಃಖಕರ ಸಂಗತಿಯಾಗಿದೆ ಇವೆಲ್ಲವನ್ನು ಸರಿಪಡಿಸಲು ಮಹಿಳೆಯರ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಸ್ವಾಗತ ಪ್ರೊ.ಪುಷ್ಪಾಬಾಯಿ ಕೊರೆ, ನಿರೂಪಣೆ ಡಾ.ಶ್ರೀಕಾಂತ ಚವ್ಹಾಣ, ವಂದನೆ ಜ್ಯೋತಿ.