ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ: ಆನಂದ ವಾರಿಕ
ಕಲಬುರಗಿ:ಮಾ,21: ಅವಧಿಗಿಂತ ಮುಂಚೆಯೆ ಬೇಸಿಗೆ ಪ್ರಾರಂಭವಾಗಿದ್ದು ಕಲಬುರಗಿ ನಗರದ ಎಲ್ಲಾ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರಿನ ದಿನ ಬಳಕೆಯ ನೀರು ಸರಬರಾಜು ಮಾಡಬೇಕು ಬಸ್ ನಿಲ್ದಾಣಗಳಲ್ಲಿ ಅತಿ ಹೆಚ್ಚು ಜನ ಸಂದಣಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಗೂ ಕಲಬುರಗಿ ಗ್ರಾಮೀಣ ಪ್ರದೇಶಗಳಲ್ಲಿ ತಾಲ್ಲೂಕುಗಳಲ್ಲಿಯೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಬೇಕು ಹಸುಗಳಿಗೆ ನೀರಿನ ಹಾಗೂ ಮೇವಿನ ವ್ಯವಸ್ಥೆ ಜಿಲ್ಲಾಡಳಿತದ ವತಿಯಿಂದ ಮಾಡಬೇಕೆಂದು ತಾಲ್ಲೂಕಾಡಳಿತ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಧೀಕಾರಿಗಳು ನೀರಿನ ಸಮಸ್ಯೆಗೆ ಸ್ಪಂದಿಸಬೇಕೆಂದು ಸಮಾಜ ಸೇವಕ ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಮನವಿ ಮಾಡಿದ್ದಾರೆ. ಇದೆ ಸಂದರ್ಭದಲ್ಲಿ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಭೋಜರಾಜ ಕುಲಕುಂದಾ ಕಿರಣ ಚಿಕಲಿಕರ ಶಶಿಕುಮಾರ್ ಮದ್ದೂರ ನರಸಿಂಹಲು ಅಡಕಿ ಬಸವರಾಜ ಕವನಳ್ಳಿ ಸಂಜಯ ಕವನಳ್ಳಿ ಸಚೀನ ಶ್ರೀಮಂಗಲೆ ಸಿದ್ದು ಜೇವರ್ಗಿ ಹಣಮಂತ ಶಿವಪುರ ಪ್ರಕಾಶ್ ಹುಣಸಿಗೇರಾ ಪ್ರಕಾಶ್ ಕಲಕೋರಾ ಅನೀಲಕುಮಾರ ಗೋಗಿ ಅನೇಕರು ಉಪಸ್ಥಿತರಿದ್ದರು.