ಅಂಗವಿಕಲರ ಹೊಸ ಜೀವನಕ್ಕೆ ಸ್ಪೂರ್ತಿ ತುಂಬುತ್ತಿರುವ ರಾಜಶ್ರೀ ಸಿಮೆಂಟ್ : ಆಶಪ್ಪ
ಸೇಡಂ,ಮಾ,21: ಅಂಗವಿಕಲತೆಯಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೃತಕ ಕಾಲು ಜೋಡಣೆ ಕಾರ್ಯಕ್ರಮ ರೂಪಿಸುವ ಮೂಲಕ ಇಲ್ಲಿನ ಅಂಗವಿಕಲರಿಗೆ ಹೊಸ ಜೀವನಕ್ಕೆ ಪೂರ್ತಿ ತುಂಬುವ ಕೆಲಸ ರಾಜಶ್ರೀ ಸಿಮೆಂಟ್ ಕಂಪನಿ ಮಾಡುತ್ತಿರುವುದು ಸಂತಸ ತಂದಿದೆ ಎಂದು ಸಹಾಯಕ ಉಪ ವಿಭಾಗಾಧಿಕಾರಿ ಆಶಪ್ಪ ಕೆಎಎಸ್ ಹೇಳಿದರು.
ತಾಲೂಕಿನ ರಾಜಶ್ರೀ ಸಿಮೆಂಟ್ ಕಂಪೆನಿಯಲ್ಲಿ
ಅಲ್ಟಾಟೆಕ್ ಕಮ್ಯುನಿಟಿ ವೆಕ್ಟೇರ್ ಫೌಂಡೇಶನ್
ರಾಜಶ್ರೀ ಸಿಮೆಂಟ್ ವಕ್ರ್ಗ,( ಸಿ ಎಸ್ ಆರ್ ವಿಭಾಗದ ಅಡಿಯಲ್ಲಿ) ಮತ್ತು ಕರ್ನಾಟಕ ಮಾರ್ವಾಡಿ ಯೂಥ್ ಫೆಡರೇಶನ್, ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಕೃತಕ ಕಾಲು ಜೋಡಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕೃತಕ ಕಾಲು ಜೋಡಣೆ ಸದುಪಯೋಗ ಸುತ್ತಮುತ್ತಲಿನ ಅಂಗವಿಕಲರು ಪಡೆದುಕೊಳ್ಳಬೇಕೆಂದು ಹೇಳಿದರು.
ರಾಜಶ್ರೀ ಸಿಮೆಂಟ್ ಕಂಪನಿಯ ಉಪಾಧ್ಯಕ್ಷರು ಎಫ್ ಎಚ್ ಆರ್ ಆಗಿರುವಂತಹ ಕೆವಿವಿಎಸ್ ನಾರಾಯಣ ಅವರು ಮಾತನಾಡಿ ರಾಜಶ್ರೀ ಸಿಮೆಂಟ್ ಕಂಪನಿಯು ಸಿಎಸ್ ಆರ್ ವಿಭಾಗದಿಂದ ಸತತ ಮೂರು ವರ್ಷಗಳಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ, ಸಾವಿರಾರು ಅಂಗವಿಕಲರಿಗೆ ಕೃತಕ ಕಾಲು ಜೋಡಿಸುವ ಮೂಲಕ ಆರ್ಥಿಕವಾಗಿ ಸಫಲರಾಗಲು ಪ್ರಯತ್ನಿಸಲಾಗುತ್ತಿದೆ, ಈ ಕಾರ್ಯಕ್ರಮಕ್ಕೆ ಕಂಪನಿ ವ್ಯಾಪ್ತಿಯಲ್ಲಿರುವ ಜಿಲ್ಲೆಗಳು ಹಾಗೂ ತೆಲಂಗಾಣ ರಾಜ್ಯದಿಂದಲೂ ಕೂಡ ಫಲಾನುಭವಿಗಳು ಭಾಗವಹಿಸುತ್ತಿದ್ದಾರೆ, ಈ ಕಾರ್ಯಕ್ರಮವು ಜನರಿಗೆ ತುಂಬಾ ಅನುಕೂಲಕರವಾಗಿದ್ದು ಇದನ್ನು ನಾವು ಪ್ರತಿ ವರ್ಷವೂ ಹಮ್ಮಿಕೊಳ್ಳಲು ಯೋಜನೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶಿವಾನಂದ್ ಮೇತ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ತಾಲೂಕ ಪಂಚಾಯತಿಯ ಇಓ ಚನ್ನಪ್ಪ ರಾಯಣ್ಣನವರ, ಹಾಗೂ ಸಿಎಸ್ ಆರ್ ವಿಭಾಗದ ಮುಖ್ಯಸ್ಥ ಚೇತನ್ ವಾಘ್ಮೋರೆ ರಾಜಶ್ರೀ ಸಿಮೆಂಟ್ ಕಂಪನಿಯ ಲೇಡೀಸ್ ಕ್ಲಬ್ ವಿಭಾಗದ ಮುಖ್ಯಸ್ಥರಾದಂತಹ ಶ್ರೀಮತಿ ವೈಶಾಲಿ ಪವರ್, ಶ್ರೀಮತಿ ಶಿಶೋಟಿಯ ಹಾಗೂ ಸಿಎಸ್ ಆರ್ ವಿಭಾಗದ ಅಶ್ವಿನಿ ರಾಥೋಡ್ ಶರಣಪ್ಪ ಎರಗೊಳ್ ಸೋಮಶೇಖರ್ ಕಾಶಿಬಾಯಿ ಹಾಗೂ ಮಾಯದೇವಿಯವರು ಮತ್ತು ಈ ಆರ್ ವಿಭಾಗದ ಶ್ರೀ ವಿವೇಕಾನಂದ ಬೆಟಗೇರಿ ಮತ್ತು ರಾಮಚಂದ್ರ ಜೋಶಿ ಇದ್ದರು.