ಯಡ್ರಾಮಿ ನಾಗಅಲ್ಲಾಪೂರ ಚೆಕ್ ಪೋಸ್ಟ್ ಬಳಿ 2 ಲಕ್ಷ ಜಪ್ತಿ
ಯಡ್ರಾಮಿ:ಮಾ.21:ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲೂಕಿನ ನಾಗ ಅಲ್ಲಾಪೂರ ಚೆಕ್ ಪೋಸ್ಟ್ ಬಳಿ ಎರಡೂ ಪ್ರತೇಕ ವಾಹನಗಳಿಂದ 2 ಲಕ್ಷ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಬುಧವಾರ ಚೆಕ್ ಪೋಸ್ಟ್ ಹತ್ತಿರ ವಾಹನ ತಪಾಸಣೆ ಮಾಡುವ ವೇಳೆಯಲ್ಲಿ ಬಿಜಾಪುರ ಕಡೆಯಿಂದ ಯಾದಗಿರಿ ಹೋಗುತಿರುವ ಬುಲೆರೋ ಪಿಕಪ್ ವಾಹದಲ್ಲಿ ದಾಖಲೆ ಇಲ್ಲದೆ ಇರುವ 1 ಲಕ್ಷ ಹಣ.
ಸುರಪುರ ತಾಲೂಕಿನ ಹದನೂರು ಗ್ರಾಮದಿಂದ ಸಿಂದಗಿ ಹೋಗುತಿರುವ ಟಾಟಾ ನೇಕ್ಸಾನ್ ಕಾರಿನಿಂದ 1 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.ಎರಡೂ ವಾಹನದ ಹಣಕ್ಕೆ ಯಾವುದೇ ದಾಖಲೆ ಇಲ್ಲದ ಒಟ್ಟು 2 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಚೆಕ್ ಪೋಸ್ಟ್ ತಂಡವು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಚೆಕ್ ಪೋಸ್ಟ್ ತಂಡದಲ್ಲಿ ಯಡ್ರಾಮಿ ಠಾಣೆಯ ಪಿ.ಎಸ್.ಐ ವಿಶ್ವನಾಥ ರೆಡ್ಡಿ ಹಾಗೂ ಎಸ್.ಎಸ್.ಟಿ.ತಂಡದ ಸದಸ್ಯರು ಹಾಗೂ ಪೆÇಲೀಸ್ ಸಿಬ್ಬಂದಿವರ್ಗ ಇತರರು ಉಪಸ್ಥಿತರಿದ್ದರು.