ಏ.28 ಕ್ಕೆ ಸೋಮಲಾಪುರದಲ್ಲಿ 32ನೇ ಶ್ರೀ ಚಿದಾನಂದಸ್ವಾಮಿ ರಥೋತ್ಸವ
ಸಂಜೆವಾಣಿ ವಾರ್ತೆ
ಕುರುಗೋಡು:ಮಾ.21 ದುಂದು ವೆಚ್ಚದ ಮದುವೆಗಳು ಪ್ರಸ್ತುತ ಪ್ರತಿಷ್ಠೆಯಾಗಿ ಪರಿಣಮಿಸಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರು ಸಾಲದ – ಸುಳಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ಸರಳ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹಗಳಿಗೆ ಉತ್ತೇ ಜನ ನೀಡಬೇಕಾಗಿದೆ ಎಂದು ಸುಕ್ಷೇತ್ರ ಸೋಮಲಾಪುರ ಗ್ರಾಮದ ಮಠ ಸೇರಿದಂತೆ ಪಂಚ ಮಠಾಧೀಶರಾದ ಶ್ರೀ ಸದ್ಗುರು ಷಡಕ್ಷರಿ ಸ್ವಾಮಿ ಅವಧೂತರು ಹೇಳಿದರು.
ಪಟ್ಟಣ ಸಮೀಪದ ಸುಕ್ಷೇತ್ರ ಸೋಮಲಾಪುರ ಗ್ರಾಮದ ಆರಾಧ್ಯ ದೈವ ಚಿದಾನಂದ ಸ್ವಾಮಿ ಅವಧೂತರ 32 ನೇ ವರ್ಷದ ಪುಣ್ಯರಾಧನೆ ಪ್ರಯುಕ್ತ ಏ.28 ರಂದು ಸಂಜೆ ಜರುಗಲಿರುವ ಮಹಾರಥೋತ್ಸವ ಮತ್ತು ಅಂದು ಬೆಳಿಗ್ಗೆ ಸರ್ವಧರ್ಮ ಸಾಮೂ ಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಕರೆಯಲಾಗಿದ್ದ
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ತಿಳಿಸಿದರು.
2024ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಬೇಕು , ಅಧಿಕಾರಿಗಳ ಅತ್ತಿರ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆದು ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಕ್ರಮಗಳು ಜರುಗಿಸಬೇಕು ಎಂದು ಶ್ರೀಗಳು ಗ್ರಾಮದ ಜನರಿಗೆ ತಿಳಿಸಿದರು.
ಆರ್ಥಿಕ ಸಂಕಷ್ಟದ ಕಾರಣ ಅನೇಕ ಮದುವೆಗಳು ನಿಂತುಹೋಗಿವೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಮದುವೆಗೆ ನೆರವಾಗುವುದು ಸರ್ವಧರ್ಮ ಸಾಮೂಹಿಕ ವಿವಾಹದ ಉದ್ದೇಶವಾಗಿದೆ ಎಂದು ಹೇಳಿದರು.
ಸದ್ಗುರು ಷಡಕ್ಷರಿ ಸ್ವಾಮಿ ಅವಧೂ ತರ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಜರುಗಲಿದೆ. ವಧು-ವರರಿಗೆ ಬಟ್ಟೆ ಬರೆ, ಚಿನ್ನದ ತಾಳಿ, ಕಾಲುಂಗುರ, ಭಾಸಿಂಗ, ಪೇಟ ಸೇರಿದಂತೆ ಮದುವೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಕೊಡಲಾಗುವುದು ಎಂದು ತಿಳಿಸಿದರು.
ಆಸಕ್ತರು ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂ ದಿಗೆ ಸೋಮಲಾಪುರ ಗ್ರಾಮದ ಶ್ರೀ ಚಿದಾನಂದ ಮಠಕ್ಕೆ ಆಗಮಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9980084404, 9900365453, ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಜನರು ಉಪಸ್ಥಿತರಿದ್ದರು.