ಯುವಜನರಿಂದ ಸಧೃಡರಾಷ್ಟ್ರ ನಿರ್ಮಾಣ:ಚನ್ನಬಸವನಗೌಡ ಪಾಟೀಲ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ21: ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಯುವ ಜನತೆ ಹೆಚ್ಚೆಚ್ಚು ತೊಡಗಿಸಿಕೊಳ್ಳುವುದರಿಂದ ದೇಶವನ್ನು ಸಧೃಡವಾಗಿ ಕಟ್ಟಲು ಸಾಧ್ಯವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೇಲ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ವಿಶೇಷ ಜಿಲಾ ್ಲಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿ ಬಗ್ಗೆ ಚಿಂತಿಸುವ ಯುವಕರು  ನಾಯಕರಾಗುತ್ತಾರೆ. ಇಂತ ನಾಯಕರುಗಳನ್ನು ಬೆಳೆಸಲು ಬಿಜೆಪಿ ಪಕ್ಷವು ವೇದಿಕೆಯಾಗಿದೆ. ಅಲ್ಲದೇ ಪಕ್ಷ ನಿಷ್ಟೆ, ಪ್ರಮಾಣಿಕತೆಯಿಂದ ಯಾರು ಪಕ್ಷದಲ್ಲಿ ದುಡಿಯುತ್ತಾರೋ ಅಂತವರಿಗೆ ಪಕ್ಷ ಎಂದಿಗೂ ಕೈ ಬಿಡುವುದಿಲ್ಲ. ಹೀಗಾಗಿ ಜಿಲ್ಲಾ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು  ಪರಿಣಾಮಕಾರಿ  ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಪಕ್ಷ ನೀಡಿರುವ ಯುವ ಚೌಪಾಲ್, ನಮೋ ಯುವ ಭಾರತ್, ಗೋಡೆ ಬರಹ ಸೇರಿ ಹಲವು  ಜವಾಬ್ದಾರಿಯನ್ನು ಈಗಾಗಲೇ ಯುವ ಮೋರ್ಚಾದ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೊಸಪೇಟೆಯ ಮಂಡಲ ಪದಾಧಿಕಾರಿಗಳು ತುಂಬಾ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ದೇಶದ ವಿಚಾರ ಅಂತ ಬಂದಾಗ ಬಿಜೆಪಿ ಯುವ ಮೋರ್ಚಾ ಸದಾ ಮುಂದೆ ನಿಲ್ಲುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಸಾಮಾಜಿಕ ಅನ್ಯಯಗಳ ವಿರುದ್ಧ ಹೋರಾಡಲು ಸಶಕ್ತ ಯುವ ಪಡೆ ಸಿದ್ದವಾಗಬೇಕಿದೆ ಎಂದರು. 
ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಡವಿಸ್ವಾಮಿ ಹೀರೆಮಠ ಸಂಘಟನಾತ್ಮಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳಾದ ಕೆಎಚ್ ಎಂ. ಸಚೀನ್, ವಿನೋದ್ ಜಾಡರ್, ಸೂರಿ ಬಂಗಾರು, ಸಂಗಮೇಶ್ ಕಡೆಮನಿ, ನಂದಿ ವಿಕ್ರಮ್, ಶ್ರೀಕಾಂತ್ ಪೂಜಾರ್, ದಿವಾಕರ್ ಗೌಡ, ಅಜಯ್ ಕುಮಾರ್, ಪುನೀತ್ ಕುಮಾರ್, ವ್ಯಾಸರಾಜ್, ಅಯ್ಯಳ್ಳಿ ರಾಜು, ಸಂಪತ್ ಮೂರ್ತಿ, ಹನುಮನಾಯ್ಕ್ ಪಾಲ್ಗೊಂಡಿದ್ದರು.