ಸಾವಯವ ಗೊಬ್ಬರ ಬಳಕೆಯಿಂದ ವೆಚ್ಚ ಕಡಿಮೆ
ನವಲಗುಂದ,ಮಾ21 : ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಹಾಗೂ ಮಣ್ಣಿನ ಆರೋಗ್ಯ ಹೆಚ್ಚುತ್ತದೆ ಎಂದು ಕೃಷಿ ಸಂಶೋಧನಾ ನಿವೃತ್ತ ನೌಕರ ಶ್ರೀರಾಮಚಂದ್ರ ಪದಕಿಹೇಳಿದರು.
ಅವರು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ದೇಶಪಾಂಡೆ ಫೌಂಡೇಶನ್ ಹಾಗೂ ಬೆಟರ್ ಕಾಟನ್ ಇನಿಸಿಟಿವ್ ಇವರ ಸಹಭಾಗಿತ್ವದಲ್ಲಿ ಈ ವರ್ಷದ ಪ್ರಮುಖ ರೈತರ ಸಭೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಸಾವಯವ ಕೃಷಿ, ರಾಸಾಯನಿಕಗಳ ಬಳಕೆಯ ಜೊತೆ ಬೆಳೆಯ ನಿರ್ವಹಣೆ ಹಾಗೂ ದೇಶಪಾಂಡೆ ಫೌಂಡೇಶನ್ ಪ್ರಾಜೆಕ್ಟ್ ಗಳ ಮಾಹಿತಿ ನೀಡಿದರು.
ಮಹದಾಯಿ ರೈತ ಹೋರಾಟ ಮುಖಂಡ ಚಂದ್ರಗೌಡ ಪಾಟೀಲ್ ಮಾತನಾಡಿ ಸಾವಯವ ಕೃಷಿ ಒಂದು ಸಮಗ್ರ ಕೃಷಿ ಉತ್ಪಾದನೆ ಪದ್ಧತಿ. ಸ್ಥಳೀಯವಾಗಿ ಲಭ್ಯ ಇರುವ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಹಾಗೂ ರೋಗಗಳ ನಿರ್ವಹಣೆ, ಗುಣಮಟ್ಟದ ಆಹಾರ ಉತ್ಪಾದನೆ ಕೈಗೊಳ್ಳುವ ಸುಸ್ಥಿರ ಬೇಸಾಯ ಪದ್ಧತಿ ಎಂದರೆ ಅದು ಸಾವಯವ ಕೃಷಿ ಎಂದರು
ರೈತ ಮುಖಂಡ ಮೈಲಾರಪ್ಪ ವೈದ್ಯ, ಗುರುನಾಥ್ ಬಿರಾದಾರ್, ರಾಜಭಕ್ಷಿ, ಮೃತ್ಯುಂಜಯ ಸಾಲಿಮಠ, ಅಮೃತ ಹಿರೇಮಠ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.