ಆರೋಗ್ಯಕೇಂದ್ರದಲ್ಲಿ ರಕ್ತದಾನ ಶಿಬಿರ
ಮುನವಳ್ಳಿ,ಮಾ21: ಯಕ್ಕುಂಡಿಯ ಪ್ರಾಥಮಿಕ ಆರೋಗ್ಯಕೇಂದ್ರಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ರಕ್ತ ಭಂಡಾರ ಬೆಳಗಾವಿ, ಗ್ರಾಮ ಪಂಚಾಯತ ಯಕ್ಕುಂಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಯಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಯಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ನರಸಾರಡ್ಡಿ ಚಾಲನೆ ನೀಡಿದರು. ಸಮಾರಂಭದಲ್ಲಿ ಜಿಲ್ಲಾ ರಕ್ತ ಭಂಡಾರದ ವೈದ್ಯಾಧಿಕಾರಿಗಳಾದ ಆರ್ ಜಿ ಪಾಟೀಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯಾಧಿಕಾರಿ ಸುಜಾತಾ ನಾಯ್ಕ, ಹಿರಿಯರಾದ ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ,ಅಬ್ದುಲ್‍ಖಾದರಜೈಲಾನಿ ಬಾರಿಗಿಡದ, ಪಿಡಿಒ ವೈ ಪಿ ಬೋಳಶೆಟ್ಟಿ, ಲಕ್ಷ್ಮಣ ದೊಡಮನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಮ್ ಎಮ್ ಅಂಗಡಿ, ಪತ್ರಕರ್ತ ಚಂದ್ರಕಾಂತ ಸಂಗಟಿ, ಇರಪಾನ ಮುಜಾವರ, ಲಕ್ಷ್ಮಣ ಬಟಕುರ್ಕಿ,ಪಿ ವಾಯ್ ನಾಯ್ಕರ, ಸಿ ಎಮ್ ಮುರಗೋಡ,ರೇಣುಕಾ ದೊಡ್ಡಕುರಿ, ಲಕ್ಷ್ಮೀ ಹೊಸವಾಳ,ಎಸ್ ಎಚ್ ಜಂಗವಾಡ,ಎಸ್ ವ್ಹಿ ಬೂದಿ, ಕಾಳಮ್ಮ ಗನಮುಖಿ, ಗ್ರಾಮ ಪಂಚಾಯತ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ರಕ್ತದಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.