ಕುವೆಂಪು ನಗರದಲ್ಲಿ ಬೀಗ ಹಾಕಿದ ಮನೆಗಳ ಸರಣಿ ಕಳ್ಳತನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.21: ನಿನ್ನೆ ತಡ ರಾತ್ರಿ ಇಲ್ಲಿನ ಕುವೆಂಪ ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗಿರಿಯಾಗಿರಿಸಿಕೊಂಡ ಕಳ್ಳರು ತಮ್ಮ ಕೈ ಚಳಕ ಮೆರೆದು ಚಿನ್ನ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಬೀಗ ಹಾಕಿದ್ದ ಐದು ಮನೆಗಳ ಬೀಗ ಮುರಿದು ಮನೆಯಲ್ಲಿನ ಬೆಳ್ಳಿ ಬಂಗಾರ ದ ಆಭರ ಮತ್ತು ಹಣವನ್ನಷ್ಟೇ ತೆಗೆದುಕೊಂಡೊದ್ದಾರೆ. ಮೂರು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ ಕಳ್ಳರು.
ಪ್ರಕಾಶ್ ಎಂಬುವವರು ಮನೆಯಲ್ಲಿ  2 ವರೆ ಲಕ್ಷ್ ರೂ ನಗದು ಹಣ ಹಾಗೂ ನಾಲ್ಕು ತೊಲೆ ಬಂಗಾರ ಸೇರಿದಂತೆ
ಐದು ಮನೆಯಲ್ಲಿ ಒಟ್ಟು 10 ತೊಲೆ ಬಂಗಾರ, 9 ಲಕ್ಷಕ್ಕೂ ಅಧಿಕ ಹಣ ಕದಿಯಲಾಗಿದೆ.
ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾದ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಕೆದ ಹಲವು ದಿನಗಳಿಂದ ನಿರಂತರವಾಗಿ ಬೀಗ ಹಾಕಿದ ಮನೆಗಳ ಬೀಗ ಮುರಿದು ತಮ್ಮ ಕೆಲಸ ನಡೆಸಿದ್ದಾರೆ.