ಮಾಜಿ ಮೇಯರ್ ನಾಗಮ್ಮಳಪುತ್ರನಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.21 :ಕಳೆದ ಮಾರ್ಚ್ 5 ರಂದು  ಮಾಜಿ ಮೇಯರ್ ನಾಗಮ್ಮ ಅವರ ಮಗನಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ತಿಪ್ಪೆಸ್ವಾಮಿ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾನೆ
ತಲೆ ಭಾಗಕ್ಕೆ ಬಡಿಗೆಯಿಂದ ಬಲ ವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಘಟನೆ ಹಿನ್ನಲೆ.
ಬಳ್ಳಾರಿ ಮಾಜಿ ಮೇಯರ್ ನಾಗಮ್ಮ ಅವರ ಮಗ ರಘು ಅವರ ಹುಟ್ಟು ಹಬ್ಬದ ದಿನದಂದೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಹುಟ್ಟು ಹಬ್ಬದ ವೇಳೆ ರಸ್ತೆಯಲ್ಲಿ ಡಿಜೆ ಹಾಕಿ ತಲವಾರು( ಖಡ್ಗ) ಹಿಡಿದು  ರಘು ಮತ್ತವರ ಗ್ಯಾಂಗ್ ಡ್ಯಾನ್ಸ್ ಮಾಡುತ್ತಿದ್ದರಂತೆ.
ಈ ವೇಳೆ ರಸ್ತೆ  ಬಿಡಿ ಎಂದು ಪ್ರಶ್ನೆ ಮಾಡಿದ್ದ ಹುಸೇನ್ ನಗರದ ಯುವಕ ತಿಪ್ಪೆಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ರಘು ಅಂಡ್ ಗ್ಯಾಂಗ್.
ಇಲ್ಲಿನ ಗಾಂಧಿ ನಗರ ಠಾಣೆಯಲ್ಲಿ ರಘು ಸೇರಿ ಎಂಟು ಜನರ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು ಆಗಿತ್ತು. ಪ್ರಮುಖ ಆರೋಪಿ ರಘು ಸೇರಿದಂತೆ ಅನಿಲ್,  ಮುತ್ತು, ಬಾಸ್ಕರ್ ಸೇರಿದಂತೆ ಏಳು ಜನರ ಬಂಧನವಾಗಿತ್ತು.