ನಗರದ ನೀರಿನ ಸಮಸ್ಯೆಗೆ  ಟ್ಯಾಂಕರ್ : ಭರತ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.21, ಮಾ.21: ನಗರ ಕ್ಷೇತ್ರದ ಜನರು ಈ ಬೇಸಿಗೆಯಲ್ಲಿ ಎದಿರಿಸುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಗರದ ಶಾಸಕ ಭರತ್ ರೆಡ್ಡಿ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿದ್ದಾರೆ.
ಅವರು ಸ್ಥಾಪಿಸಿರುವ  ಟಚ್ ಫಾರ್ ಲೈಫ್ ಫೌಂಡೇಶನ್ ನಿಂದ  ನಗರ ಕ್ಷೇತ್ರದ 28 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಸಲು ನಿನ್ನೆ  ನಗರದ ನಳಂದ ಕಾಲೇಜು ಆವರಣದಲ್ಲಿ ಟ್ಯಾಂಕರ್ ಗಳಿಗೆ
ಬಳ್ಳಾರಿ ಬ್ರೂಸ್ ಪೇಟೆ ಹಾಗೂ ಕಂಟೋನ್ಮೆಂಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹುಸೇನ್ ಪೀರಾಂ ಹಾಗೂ ಕೆ.ಎಂ.ಅಭಿಲಾಶ್ ಚಾಲನೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ನಾರಾ ಭರತ್ ರೆಡ್ಡಿ, ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಈ ವರ್ಷ ಮಳೆಯ ಪ್ರಮಾಣವೂ ಕಡಿಮೆಯಾಗಿ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿಲ್ಲ. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹಾಗೂ ಜಿಲ್ಲಾಡಳಿತ ನನ್ನ ಮನವಿಯನ್ನು ಪುರಸ್ಕರಿಸಿ, ನಗರಕ್ಕೆ ಬೇಕಾದ ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಸಹಕಾರ ನೀಡಿರುತ್ತಾರೆ. ಆದಾಗ್ಯೂ ಕೂಡ ವಾರ್ಡ್ ಗಳಲ್ಲಿ ನೀರಿನ ಕೊರತೆ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ನಗರದ ಪ್ರತಿ ವಾರ್ಡಿಗೂ ಅಗತ್ಯ ಇರುವ ಕಡೆಗಳಲ್ಲಿ  ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ನೀರಿನ ಸಮಸ್ಯೆ ಇರುವವರು ಈ 9900108108 ನಂಬರ್ ಗೆ ಕಾಲ್ ಮಾಡಿ ತಿಳಿಸಬೇಕು
ಎಂದು ತಿಳಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ,  ಚಾನಾಳ್ ಶೇಖರ್,  ಟಿಲ್ಲು, ಎಸ್ಟಿಡಿ ಮಂಜು, ಅರ್ಷದ್, ಧರ್ಮಶ್ರೀ, ಮೋಕ ನಾಗರಾಜ, ವಿಶ್ವನಾಥ ನಾಯಕ್, ಸೀನಾ, ಅಶೋಕ್ ರೆಡ್ಡಿ, ಬೆಣಕಲ್ ರಘು, ಕೆ.ಶಿವಕುಮಾರ್, ಶಿವು, ಕಗ್ಗಲ್ ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.