ಲಕ್ಷ್ಮೇಶ್ವರ: ಶಾಂತಿ ಸಭೆ
ಲಕ್ಷ್ಮೇಶ್ವರ,ಮಾ21: ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಮತ್ತು ರಂಜಾನ್ ಹಿನ್ನೆಲೆಯಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಪಿಎಸ್‍ಐ ಈರಣ್ಣ ರಿತ್ತಿ ಅವರು ಹಬ್ಬ ಹರಿದಿನಗಳು ಪರಸ್ಪರ ಶಾಂತಿ ಸೌಹಾರ್ದತೆ ಮತ್ತು ಕೋಮು ಸೌಹಾರ್ದ ತೆ ಸಾರುವ ಸಂಕೇತಗಳಾಗಿದ್ದು ಎಲ್ಲರೂ ಶಾಂತಿ ಸುವ್ಯವಸ್ಥೆಯಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಅನವಶ್ಯಕ ವಾಟ್ಸ್‍ಪ್ ಮೆಸೇಜುಗಳು ಫೇಸ್ಬುಕ್ ಗಳು ಅನಾಮದೆಯ ಫೆÇೀನ್ ಕರೆಗಳು ಓಟಿಪಿಗಳು ಬಂದಾಗ ಮತ್ತು ಸೈಬರ್ ಕ್ರೈಂ ಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಗಂಗಾಧರ ಮೆಣಸಿನಕಾಯಿ, ಸುಲೇಮಾನ್ ಕಣಕೆ, ಚಂದ್ರು ಹಂಪಣ್ಣವರ, ಮಂಜುನಾಥ ಹೊಗೆಸೊಪ್ಪಿನ, ಸದಾನಂದ ನಂದಣ್ಣನವರ, ಇಸ್ಮಾಯಿಲ್ ಆಡೂರ, ನಜೀರ ಗದಗ, ಭೀಮಣ್ಣ ಯಂಗಾಡಿ, ನಾಗರಾಜ್ ಹಾವಳಕೇರಿ, ಶಿವಣ್ಣ ಕಟಗಿ ಸೇರಿದಂತೆ ಅನೇಕರಿದ್ದರು. ಎಂ.ಎಂ. ಶೀಗೆಹಳ್ಳಿ, ಮಾರುತಿ ಲಮಾಣಿ ಸಿಬ್ಬಂದಿ ವರ್ಗದವರು ಇದ್ದರು.