ಮಠಂ ಗುರುಪ್ರಸಾದರ ಪಂಚಾಂಗ ಬಿಡುಗಡೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.21: ನಗರ ನಿವಾಸಿಗಳಾದ ಆಂದ್ರಪ್ರದೇಶದ ಉರವ ಕೊಂಡ ಮಂಡಲದ ಲತ್ತವರಂ ಗ್ರಾಮದ ಪಂಚಾಂಗ ಕತೃ ಮಠಂ ಗುರುಪ್ರಸಾದ್ ಅವರು ರಚಿಸಿದ ಶ್ರೀ ಕ್ರೋದನಾಮ ಸಂವತ್ಯರ ನೂತನ ಪಂಚಾಂಗದ ಬಿಡುಗಡೆ ಮಾ.19 ರಂದು ಉರವಕೊಂಡದಲ್ಲಿ ನಡೆಯಿತು.
ಉರವಕೊಂಡ ಗವಿಮಠದ 8 ನೇ ಪೀಠಾಧಿಪತಿ ಚನ್ನಬಸವ ರಾಜೇಂದ್ರಸ್ವಾಮಿ, ಕರಿಬಸವ ರಾಜೇಂದ್ರಸ್ವಾಮಿ ಮತ್ತು ನಗರದ ಕಲ್ಯಾಣಸ್ವಾಮಿಗಳು ಪಂಚಾಂಗವನ್ನು ಬಿಡುಗಡೆ ಮಾಡಿದರು.