ಅನುಮಾನಸ್ಪದವಾಗಿ ಸುಟ್ಟ ರೀತಿಯಲ್ಲಿ ಶವ ಪತ್ತೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.21:- ವ್ಯಕ್ತಿ ಓರ್ವ ಬೆಂಕಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಕೋಟೆ ಕೊಪ್ಪಲು ಸಮೀಪದ ಅರಣ್ಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಹುಣಸೂರು ತಾಲೂಕಿನ ಹರವೆ ಗ್ರಾಮದ ಲೇಟ್ ಚಿಕ್ಕ ಶೆಟ್ಟಿ ಎಂಬುವರ ಪುತ್ರ ಎಚ್.ಸಿ. ಹರೀಶ್(40) ಎಂಬುವರೇ ಅನುಮಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದಾರೆ ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಮೃತರು ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಚಿಲ್ಲರೇ ಅಂಗಡಿ ನಡೆಸುತ್ತಿದ್ದು ರಾತ್ರಿ ಅಂಗಡಿ ಬಾಗಿಲು ಹಾಕಿ ಹರವೆ ಗ್ರಾಮಕ್ಕೆ ತೆರಳಿದವರು ಸುಟ್ಟ ರೀತಿಯಲ್ಲಿ ಇವರ ಶವ ಪತ್ತೆಯಾಗಿದೆ.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಫಾರೆಸ್ಟ್ ಮಳಲಿ-ಹೊಸಕೋಟೆ ರಸ್ತೆಯ ಪಕ್ಕದಲ್ಲಿ ಬಳಿ ಬೈಕ್ ಸಮೇತ ಅರ್ಧಂಬರ್ಧ ಸುಟ್ಟು ಸಾವನ್ನಪ್ಪಿದಂತೆ ಶವ ಪತ್ತೆಯಾಗಿದೆ ಇವರು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ರಾತ್ರಿಯಲ್ಲಾ ಹುಡುಕಿದರು ಇವರು ಪತ್ತೆಯಾಗಲಿಲ್ಲ ಬೆಳಿಗ್ಗೆ ಈ ಅರಣ್ಯದ ಬಳಿ ಸುಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ.
ಘಟನೆಯ ವಿಷಯ ತಿಳಿದರು ತಡವಾಗಿ ಸ್ಥಳಕ್ಕೆ ಆಗಮಿಸಿದ್ದಕ್ಕೆ ಸಾರ್ವಜನಿಕರು ಸಾಲಿಗ್ರಾಮ ಪೆÇಲೀಸರು ಯಾವುದೇ ಅಹಿತಕರ ಘಟನೆ ಮತ್ತು ಅಪಘಾತ ಹಾಗೂ ಈ ರೀತಿ ಘಟನೆಗಳು ನಡೆದರೆ ಎಲ್ಲ ಮುಗಿದ ಮೇಲೆ ಕೊನೆಯಲ್ಲಿ ಪೆÇಲೀಸರು ಬರುತ್ತಾರೆ ಎಂಬ ಗಾದೆಗೆ ನಿಜವಾದಂತೆ ಸಾಲಿಗ್ರಾಮ ಪೆÇಲೀಸರು ನಡೆದುಕೊಂಡರು ಎನ್ನುವ ಬಗ್ಗೆ ಕುಟುಂಬಸ್ಥರು ಮತ್ತು ಜನರು ಬೇಸರ ವ್ಯಕ್ತಪಡಿಸಿದ್ದರು.
ಸಾಲಿಗ್ರಾಮ ಪೆÇಲೀಸ್ ಠಾಣೆಯ ನಿರೀಕ್ಷ ಕೃಷ್ಣರಾಜು, ಸಿಬ್ಬಂದಿಗಳಾದ, ಚೇತನ್ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಘಟನೆಯ ಸಂಬಂಧ ಸಾಲಿಗ್ರಾಮ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.