ಲಾಂಛನ ಸಮ್ಮೇಳನದ ಆತ್ಮ :ಡಾ ಚಂದ್ರಶೇಖರ ಹೊಸಮನಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.21:ಸಾಹಿತ್ಯ ಸಮ್ಮೇಳನದ ಲಾಂಛನ ಜಿಲ್ಲೆಯ ಸಾಂಸ್ಕøತಿಕ ಪರಂಪರೆ ಪ್ರತಿಬಿಂಬವಾಗಿದೆ. ಸಮ್ಮೇಳನದ ಲಾಂಛನ ಜಿಲ್ಲೆಯ ಚರಿತ್ರೆಯನ್ನು ವಿವರಿಸುತ್ತದೆ. ಹಾಗಾಗಿ ಲಾಂಛನ ಸಮ್ಮೇಳನದ ಆತ್ಮವಿದ್ದಂತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕ ಡಾ ಚಂದ್ರಶೇಖರ ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಆವರು, ಇಲ್ಲಿಯವರೆಗೆ ಸಮ್ಮೇಳನಗಳು ಅರ್ಥಪೂರ್ಣವಾಗಿ ಸಮಾಜಮುಖಿಯಾಗಿ ನಡೆದಿರುವುದು ಇತಿಹಾಸ, ಜಿಲ್ಲೆಯ ಎಲ್ಲ ಕ್ಷೇತ್ರದ ಪ್ರತಿಭೆಗಳಿಗೆ ಪರಿಷತ್ತು ವೇದಿಕೆಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಸರಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಚಿದಾನಂದ ನಾಟೀಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಕನ್ನಡ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.
ಕಸಾಪ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು.
ಕಸಾಪ ತಾಲೂಕ ಅಧ್ಯಕ್ಷ ಡಾ ಆನಂದ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಜಯಪುರ ಜಿಲ್ಲೆ ಧಾರ್ಮಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ಸಂಪದ್ಭರಿತವಾಗಿದೆ. ದೊರೆ ಎರಡನೆಯ ಇಬ್ರಾಹಿಂ ಆದಿಲ್‍ಶಾಹಿ ಕಾಲದಿಂದಲೂ ಪ್ರತಿ ತಿಂಗಳ ಮೊದಲ ಗುರುವಾರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳತ್ತ ಬಂದ ಚರಿತ್ರೆಯಿz.É ಆ ಪರಂಪರೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಮಾಡುತ್ತ ಬಂದಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷÀ ಹಾಸಿಂಪೀರ ವಾಲೀಕಾರ ಶುಭ ಕೋರಿದರು. ವೇದಿಕೆ ಮೇಲೆ ವಿಜಯಕುಮಾರ ಘಾಟಗೆ, ನಗರ ಘಟಕದ ಅಧ್ಯಕ್ಷ ಕುಮಾರಿ ಅನ್ನಪೂರ್ಣ ಬೆಳ್ಳೆಣ್ಣವರ ಉಪಸ್ಥಿತಿರಿದ್ದರು.
ಕಾರ್ಯಕ್ರಮದಲ್ಲಿ, ಕಮಲಾ ಮುರಾಳ, ಮಹ್ಮದ ಗೌಸ ಹವಾಲ್ದಾರ, ಅಲ್ಲಿಸಾಬ ಕಡಕೆ, ಎಂ.ಬಿ. ಕಟ್ಟಿಮನಿ, ಡಾ. ಮಾಧವ ಗುಡಿ, ಮಹಾದೇವಿ ತೆಲಗಿ, ಐಹೊಳ್ಳಿ ಮುಂತಾದವರು ಉಪಸ್ಥಿತರಿದ್ದರು.