ಮನೆಯೊಳಗೆ ತಾಯಿಬೇಕು, ಮನೆಮುಂದೆ ನಾಯಿಬೇಕು:ಮಸೂತಿಶ್ರೀ
ತಾಳಿಕೋಟೆ:ಮಾ.21: ತಂದೆ ತಾಯಿಯ ಮನಸ್ಸನ್ನು ನೋಯಿಸಿದರೆ ಮಾಡುವಂತಹ ಕಾರ್ಯ ಯಾವುದೂ ಯಶಸ್ವಿಯಾಗುವುದಿಲ್ಲಾ ಕಾರಣ ಸಂಸಾರ ಸಾಕಾರ ಮಾಡಿಕೊಳ್ಳಬೇಕಾದರೆ ತಂದೆ ತಾಯಿಯವರ ಒಪ್ಪಿಗೆ ತೆಗೆದುಕೊಂಡು ಹೋಗಬೇಕೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಬುಧವಾರರಂದು 10ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ನಿರುಪಾದೀಶ್ವರನ ತಂದೆ ತಾಯಿಯವರು ಮಗ ವಯಸ್ಸಿಗೆ ಬಂದಿದ್ದಾನೆ ಅವನಿಗೆ ಲಗ್ನ ಮಾಡಬೇಕೆಂದು ಇಚ್ಚೆ ವ್ಯಕ್ತಪಡಿಸಿ ಆತ ಗುರುವಿನ ಸ್ಥಾನಮಾನದಲ್ಲಿ ವಿದ್ಯೆ ಕಲಿಯುತ್ತಿರುವ ಸಂದರ್ಬದಲ್ಲಿ ತಾಯಿ ರಾಚಮ್ಮಳು ಮಗನಿಗೆ ಪತ್ರ ಬರೆದು ನಿನ್ನ ಲಗ್ನ ಮಾಡಬೇಕಾಗಿದೆ ವಯೋಮಿತಿ ಬಂದೊದಗಿದೆ ಕಾರಣ ಗುರುಗಳು ಆತನಿಗೆ ತಿಳಿ ಹೇಳಿ ಆತನ ಸಂಸಾರಕ್ಕೆ ಅಣಿಮಾಡಿಕೊಡಬೇಕೆಂದು ಪತ್ರದಲ್ಲಿ ನಮೂದಿಸಿದ ರಾಚಮ್ಮಳ ಪತ್ರವನ್ನು ಓದಿದ ಗುರುಗಳು ಶಿಷ್ಯನಾದ ನಿರುಪಾದೀಶ್ವರನಿಗೆ ಈ ವಿಷಯ ತಿಳಿಸುತ್ತಾರೆ ಈ ವಿಷಯ ತಿಳಿದ ಮಗ ನಿರುಪಾದೀಶ್ವರ ಗುರುಗಳಿಗೂ ಹೇಳದೇ ಕೇಳದೇ ಹಿಮಾಲಯ ಪರ್ವತಕ್ಕೆ ತೆರಳಿ ಅಲ್ಲಿ ತಪಸ್ಸನ್ನು ಮಾಡುವಂತಹ ಕಾರ್ಯಕ್ಕೆ ಮುಂದಾಗುತ್ತಾನೆಂದು ಶ್ರೀಗಳು ನುಡಿದರು.
ಇತ್ತ ತಂದೆ ಗುರುಲಿಂಗಯ್ಯನವರು ಮಗನ ವಿವಾಹ ಮಾಡಿ ತಮ್ಮ ಕೆಲಸ ಪೂರ್ಣಗೊಳಿಸಬೇಕೆಂಬ ಇಚ್ಚೆ ವ್ಯಕ್ತಪಡಿಸಿದಾಗ ಒಮ್ಮಿಂದೊಮ್ಮಲಿಗೆ ಅವರಿಗೆ ಆರಾಮ ತಪ್ಪಿ ಮರಣವೂ ಕೂಡಾ ಹೊಂದುತ್ತಾರೆ ಈ ವಿಷಯ ಹೇಗೋ ಅರೀತ ಪುತ್ರ ನಿರುಪಾದೀಶ್ವರ ತನ್ನ ಸ್ವ ಊರಿಗೆ ಮಾತಾಪಿತರ ಹತ್ತಿರ ಆಗಮಿಸಿ ನೋಡುವಷ್ಟರಲ್ಲಿಯೇ ತಂದೆ ತೀರಿದ್ದನ್ನು ನೋಡಿ ತನ್ನ ತಪಸ್ಸು ಶಕ್ತಿಯಿಂದ ಒಲುಮೆ ಪಡೆದುಕೊಂಡಂತಹ ಬೆತ್ತದಿಂದ ತಂದೆಯ ಮೈಮೇಲೆ ಎಳೆದಾಗ ಮೃತಪಟ್ಟ ತಂದೆ ಒಮ್ಮಿಂದೊಮ್ಮಲೆ ಎದ್ದು ಕೂಡುತ್ತಾನೆ ಮಗ ಬಂದ ಸುದ್ದಿ ಅರೀತ ಮಾತಾಪಿತರು ಹರ್ಷ ವ್ಯಕ್ತಪಡಿಸಿ ಆತನಿಗೆ ಕನ್ಯಾ ನೋಡಲು ಮುಂದಾಗುತ್ತಾರೆ 25 ವರ್ಷ ಬ್ರಹ್ಮಚಾರಿಯಾಗಿ 50 ವರ್ಷ ಸಂಸಾರಿಕನಾದ ಮೇಲೆ ಎಲ್ಲ ಜವಾಬ್ದಾರಿ ಹೊತ್ತು ಸನ್ಯಾಸಿ ಆಶ್ರಮಕ್ಕೆ ಹಾಗೂ ವಾಹನಪ್ರಸ್ಥಾಶ್ರಮಕ್ಕೆ ಕಾಲಿಡಲಾಗುತ್ತದೆ ಎಂಬುದರ ಕುರಿತು ಶ್ರೀಗಳು ವಿವರಿಸಿದ ಅವರು ಮಹಿಳೆ ಗಂಡನಿಗಾಗಿ ಮೀಸಲಿಡುವದಷ್ಟೇ ಒಬ್ಬ ಮಠಾಧೀಶ 3 ತಿಂಗಳು ತಪಸ್ಸು ಮಾಡುವದು ಅಷ್ಟೇ ಸರಿ ಸಮಾನವಾಗಿದೆ ಎಂಬುದನ್ನು ವಿವರಿಸಿದ ಶ್ರೀಗಳು ದೇವರ ದಾಸಿಮಯ್ಯನವರು ವಿವಾಹವಾಗಿ ಹೆಂಡತಿಯ ಮೇಲೆ ವಚನ ಬರೆದಿದ್ದನ್ನು ಪ್ರಸ್ಥಾಪಿಸಿದರಲ್ಲದೇ 21 ವರ್ಷ ಶಿವಾಜಿ ಮಹಾರಾಜರು ಬೆಳವಡಿ ಮಲ್ಲಮ್ಮಳನ್ನು ತಾಯಿಯಂತೆ ತಿಳಿದಿದ್ದನ್ನು ವಿವರಿಸುತ್ತಾ ಶಿವಾಜಿ ಮಹಾರಾಜರ ಚ್ಯಾರಿತ್ರೆ ಚೆನ್ನಾಗಿಟ್ಟುಕೊಂಡು ಹೋಗಿದ್ದರಿಂದ ಅವರು ಚ್ಯಾರಿತ್ರೆಯಲ್ಲಿ ಅಜರಾಮರವಾಗಿ ಉಳಿದಿದ್ದಾರೆಂದರು.
ನಿರುಪಾದೀಶ್ವರನ ಮಾತಾಪಿತರು ಆತನನ್ನು ಕರೆದುಕೊಂಡು ಕನ್ಯಾ ನೋಡಲು ಮುಂದಾಗುತ್ತಾರೆಂದು ತಮ್ಮ ಪುರಾಣ ಪ್ರವಚನ ಮುಂದುವರೆಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.