ಬರದಿಂದ ಕಂಗೆಟ್ಟ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು: ರೈತರಲ್ಲಿ ಹರ್ಷ
ಇಂಡಿ:ಮಾ.21:ಬರದಿಂದ ಕಂಗೆಟ್ಟಿರುವ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದ್ದು ಕಾಣುತ್ತಿದೆ.ಸಕಾಲದಲ್ಲಿ ಉತ್ತಮವಾಗಿ ಮಳೆಯಾಗದೆ ಇರುವುದರಿಂದ ತಾಲೂಕಿನ ಕೆರೆ,ಹಳ್ಳ,ಬಾವಿ,ಬೊರವೆಲ್‍ಗಳು ಬತ್ತಿದ್ದರಿಂದ ಪ್ರಾಣಿ,ಪಕ್ಷಿ,ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಇಚ್ಚಾಸಕ್ತಿ,ಅಧಿಕಾರಿಗಳ ಕಳಕಳಿಯಿಂದ ಕಾಲುವೆ ಮೂಲಕ ಹಳ್ಳಕ್ಕೆ ನೀರು ಹರಿಸಿದ್ದರಿಂದ ಹಳ್ಳದ ಸುತ್ತಮುತ್ತಲಿರುವ ಗ್ರಾಮಗಳಲ್ಲಿನ ಬಾವಿ,ಬೊರವೆಲ್‍ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಕುಡಿಯುವ ನೀರು ಸೇರಿದಂತೆ ಪ್ರಾಣಿ,ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಅನುಕೂಲವಾಗಿದೆ.
ಹೌದು! ತಾಲೂಕಿನ ಸಂಗೋಗಿ ಕೆರೆಯನ್ನು ತುಂಬಿಸುವುದರ ಮೂಲಕ,ಕೆರೆ ತುಂಬಿ ನಾದ,ಗೊಳಸಾರ ಹಳ್ಳಕ್ಕೆ ನೀರು ಹರಿಸಿದ್ದರಿಂದ ಇಂದು ಸಂಗೊಗಿ ಕೆರೆಯೂ ತುಂಬಿದೆ. ನಾದ ಹಾಗೂ ಗೊಳಸಾರ ಬಳಿ ಹರಿದಿರುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಬಾಂದಾರುಗಳು ತುಂಬುದ್ದರಿಂದ ಇಂದು ಹಳ್ಳದ ದಂಡೆಯ ಮೇಲಿರುವ ಗ್ರಾಮಗಳ ಜನರು ಹಾಗೂ ರೈತರು ಹರ್ಷಗೊಂಡಿದ್ದಾರೆ.
ಹಲವು ವರ್ಷಗಳಿಂದ ಮಳೆ ಇಲ್ಲದೆ ನಾದ ಬಳಿ ಹರಿದಿರುವ ಹಳ್ಳ ನೀರು ತುಂಬಿ ಹರಿದಿರುವುದಿಲ್ಲ. ಈ ಹಳ್ಳ ನಾದ,ಗೋಳಸಾರ,ಮಿರಗಿ ಗ್ರಾಮದ ಮುಂದೆ ಹರಿದು ಭೀಮಾನದಿ ಸಂಧಿಸುತ್ತದೆ.ಈ ಹಳ್ಳಕ್ಕೆ ಹೊಂದಿಕೊಂಡಂತೆ,ನಾದ ಬಿಕೆ,ನಾದ ಕೆಡಿ,ಗೊಳಸಾರ,ಲಾಳಸಂಗಿ,ಶಿವಪೂರ ಕೆಡಿ, ಮಿರಗಿ ಗ್ರಾಮಗಳು ಸಮೀಪವಾಗುತ್ತವೆ. ಕೆಬಿಜೆಎನ್‍ಎಲ್ ಅಧಿಕಾರಿಗಳು ಈ ಹಳ್ಳಕ್ಕೆ ಕಾಲುವೆ ಮೂಲಕ ನೀರಿನ ಅನುಕೂಲಕ್ಕಾಗಿ ನೀರು ಹರಿಸಿದ್ದರಿಂದ ಈ ಎಲ್ಲ ಗ್ರಾಮಗಳಲ್ಲಿನ ಬಾವಿ,ಬೊರವೆಲ್‍ಗಳಿಗೆ ಅಂತರ್ಜಲಮಟ್ಟ ವೃದ್ದಿಯಾಗಿ ಕುಡಿಯುವ ನೀರಿನ ಅನುಕೂಲವಾಗಿದೆ. ಮಳೆಯಿಂದ ಹಳ್ಳಕ್ಕೆ ನೀರೇ ಹರಿಯದೇ ಇರುವ ಕಾಲದಲ್ಲಿ ಕಾಲುವೆ ಮೂಲಕ ನೀರು ಹರಿಸಿದ್ದರಿಂದ ಇಂದು ಅಂತರ್ಜಲಮಟ್ಟ ಹೆಚ್ಚಾಗಿ ಸಾರ್ವಜನಿಕರಿಗೆ ಅನುಕೂಲವಾಗಿದ್ದಲ್ಲದೆ,ಪ್ರಾಣಿ,ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಿದೆ.
ನಾದ ಹಳ್ಳದ ದಂಡೆಯ ಮೇಲಿರುವ ಹಲವು ಗ್ರಾಮಗಳಲ್ಲಿ ಹಾಗೂ ಜನವಸತಿ ಪ್ರದೇಶದಲ್ಲಿನ ತೆರೆದ ಬಾವಿ,ಬೊರವೆಲ್‍ಗಳಲ್ಲಿ ಅಂತರ್ಜಲಮಟ್ಟ ಕುಸಿದ್ದಿದ್ದರಿಂದ ನೀರಿನ ಸಮಸ್ಯೆ ತಲೆದೊರಿತ್ತು. ಪ್ರಾಣಿ,ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದವು. ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಲು ಮನವಿ ಮಾಡಿಕೊಂಡಿದ್ದರಿಂದ,ನಮ್ಮ ಮನವಿಗೆ ಸ್ಪಂಧಿಸಿ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಿದ್ದರಿಂದ ಇಂದು ಹಳ್ಳದ ದಂಡೆಯಲ್ಲಿರುವ ತೆರೆದ ಬಾವಿ,ಬೊರಚವೆಲ್‍ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಲು ಅನುಕೂಲವಾಗಿದೆ.ಅಲ್ಲದೆ ಪ್ರಾಣಿ,ಪಕ್ಷಿ,ಜನ,ಜಾನುವಾರುಗಳಿಗೂ ನೀರಿನ ಅನುಕೂಲವಾಗಿದೆ. ಹಳ್ಳಕ್ಕೆ ನೀರು ಹರಿಸಿ ಅನುಕೂಲ ಕಲ್ಪಿಸಿಕೊಟ್ಟ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಹಾಗೂ ರಾಂಪೂರ ಕೆಬಿಜೆಎನ್‍ಎಲ್ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಅವರಿಗೂ ನದಿ ದಂಡೆಯ ಮೇಲಿನ ಎಲ್ಲ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ. ಎಂ.ಆರ್.ಪಾಟೀಲ(ಗೊಳಸಾರ),ಹಿರಿಯ ಮುಖಂಡರು.
ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದೇಶ ಮಾಡಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ,ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ನೀರು ಹರಿಸಲಾಗಿದೆ. ನಾದ ಹಳ್ಳಕ್ಕೆ ನೀರು ಹರಿಸಿದರೆ ಹಳ್ಳದ ಸುತ್ತಮುತ್ತಲಿನ ಸುಮಾರು 8 ರಿಂದ 9 ಹಳ್ಳಿಗಳಲ್ಲಿನ ಜನರಿಗೆ ನೀರಿನ ಅನುಕೂಲವಾಗುವುದಲ್ಲದೆ,ತೆರೆದ ಬಾವಿ,ಬೊರವೆಲ್‍ಗಳು ರೀಚಾರ್ಜ ಆಗುತ್ತವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೇಳಿದ್ದರಿಂದ ನಾದ ಹಳ್ಳಕ್ಕೆ ನೀರು ಕಾಲುವೆ ಮೂಲಕ ನೀರು ಹರಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು.ಕೃಷಿಗೆ ಬಳಕೆ ಮಾಡಿಕೊಳ್ಳಬಾರದು ಎಂಬುದು ನನ್ನ ಮನವಿ.ಮನೋಜಕುಮಾರ ಗಡಬಳ್ಳಿ,ಅಧಿಕ್ಷಕ ಅಭಿಯಂತರ ಕೆಬಿಜೆಎನ್‍ಎಲ್,ರಾಂಪೂರ.