ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಮಿತಿಗೆ ಶ್ರೀಕಾಂತ್ ಬಗರೆ ನೇಮಕ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦; ಕೆಪಿಸಿಸಿ ಅಧ್ಯಕ್ಷರಾದ  ಡಿ. ಕೆ. ಶಿವಕುಮಾರ್ , ಕೆಪಿಸಿಸಿ ಸಂಹವನ & ಸಾಮಾಜಿಕ ಜಾಲತಾಣದ ಛೇರ್ಮನ್ ರಾದ  ಪ್ರಿಯಾಂಕ ಖರ್ಗೆ, ಹಿರಿಯ ಶಾಸಕರಾದ  ಶಾಮನೂರು ಶಿವಶಂಕರಪ್ಪ , ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್. ಎಸ್. ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ಹೆಚ್. ಬಿ. ಮಂಜಪ್ಪ ಅವರ ಆದೇಶ ಮೇರೆಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಮಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಬಗರೆ ಅವರನ್ನು ನೇಮಿಸಲಾಗಿದೆ.