ಪ್ಯಾರಂಫಾಸ್ ಸಂಭ್ರಮದಲ್ಲಿ ಕಾಶೀಪುರ ಗ್ರಾಮದ ರೈತ ವಿಶ್ವನಾಥ್ ಗೆ ಬಹುಮಾನ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦: ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಪ್ಯಾರಂಫಾಸ್ ಸಂಭ್ರಮ ಹಾಗೂ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುವ ಕಾರ್ಯಕ್ರಮವನ್ನು ದಾವಣಗೆರೆ ತಾಲೂಕಿನ ಕಾಶೀಪುರ ಗ್ರಾಮದಲ್ಲಿ ಹಮ್ಮಿಕೊಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ಯಾರಂಫಾಸ್ ಸಂಭ್ರಮದಲ್ಲಿ ವಿಜೇತರಾದ ಗ್ರಾಮದ ರೈತ ವಿಶ್ವನಾಥ್ ರವರಿಗೆ 8.8 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಬಹುಮಾನವನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಲ್ಲಿಕಾರ್ಜುನ್ ಅವರು ರೈತರಿಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು.ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯ ವಿಭಾಗೀಯ ಬೇಸಾಯತಜ್ಞರಾದ ರಮೇಶ್ ಕುಮಾರ್ ಹಾಗೂ ಡಿ.ಜಿ.ಎಂ. ಎಸ್. ಬಿ. ಪಾಟೀಲ್ ಉಪಸ್ಥಿತರಿದ್ದು, ಕಂಪನಿಯ ಬಗ್ಗೆ ಹಾಗೂ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಕಂಪನಿ ವತಿಯಿಂದ ಕಿರಣ್ ಕುಮಾರ್, ಉಮೇಶ್, ಬಿ, ಅರುಣ್ ಕುಮಾರ್ ಹಾಗೂ ಗಿರೀಶ್, ವಿಜಯ್, ಚಂದ್ರಶೇಖರ್ ಹಾಗೂ ಸಂಖ್ಯೆಯಲ್ಲಿ ರೈತರು ನೆರೆದಿದ್ದರು