ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಪದವಿ ಪ್ರದಾನ
ಕಲಬುರಗಿ:ಮಾ.20:ಕರುಣೇಶ್ವರ ನಗರ ಸಮೀಪದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಫಲಿತಾಂಶ ಪ್ರಕಟಣೆಯ ಭಾಗವಾಗಿ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿಅವರು ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಮಹತ್ವಕುರಿತುಜಾಗೃತಿ ಮೂಡಿಸಲು ಫಲಿತಾಂಶದ ದಿನವನ್ನು ಪದವಿ ಪ್ರದಾನಸಮಾರಂಭವಾಗಿರೂಪಿಸಲಾಗಿದೆ.ಇದರಿಂದ ಮಕ್ಕಳಲ್ಲಿ ಕಲಿಕೆಯಕುತೂಹಲ ದಿನೇದಿನೆ ಹೆಚ್ಚುತ್ತಾ ಹೋಗುತ್ತದೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಕ್ಕಳ ಮನಸ್ಸುಎಂಬುದು ಹದವಾದ ಮಣ್ಣಿನಂತಿರುತ್ತದೆ.ಈ ಮಣ್ಣಿನಲ್ಲಿ ನಾವು ಎಂತಹ ಬೀಜ ಬಿತ್ತುತ್ತೇವೋಅದೇರೀತಿಯ ಬೆಳೆಯ ಇಳುವರಿ ಪಡೆಯಬಹುದಾಗಿದೆ.ಹಾಗಾಗಿ, ಕುಟುಂಬದ ಹಂತದಲ್ಲಿ ಪೋಷಕರು ಹಾಗೂ ಶಾಲಾ ಹಂತದಲ್ಲಿ ಶಿಕ್ಷಕರು ತಮ್ಮ ಹೊಣೆಗಾರಿಕೆಅರಿತು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆಎಂದುಕಿವಿಮಾತು ಹೇಳಿದರು.
ಶಿಕ್ಷಕಿ ಮೇಘನಾ ಕುಲಕರ್ಣಿಅವರು ಮಾತನಾಡಿ, ದೊಡ್ಡವರ ಮಾತುಗಳನ್ನು ಮಕ್ಕಳು ಹೆಚ್ಚು ಆಸಕ್ತಿಯಿಂದ ಆಲಿಸದೆ ಹೋದರೂ, ದೊಡ್ಡವರು ಏನು ಮಾಡುತ್ತಿದ್ದಾರೆಎಂಬುದನ್ನುಸೂಕ್ಷ್ಮವಾಗಿಗಮನಿಸುತ್ತಿರುತ್ತಾರೆ.ಹಾಗಾಗಿ, ಹಿರಿಯರು ಎನಿಸಿಕೊಂಡವರ ವರ್ತನೆಯಾವತ್ತೂಅತ್ಯಂತಜವಾಬ್ದಾರಿಯುತವಾಗಿರಬೇಕು.ಆ ನಿಟ್ಟಿನಲ್ಲಿ ಮಕ್ಕಳನ್ನು ಹುರಿದುಂಬಿಸಲು ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದುಕಾರ್ಯಕ್ರಮದಉದ್ದೇಶಕುರಿತು ವಿವರಿಸಿದರು.
ಶಾಲೆಯ ಮುಖ್ಯಗುರುಅಂಬಿಕಾರೆಡ್ಡಿ, ನೀತಾಸ್ವಾಮಿ, ಮಧುಮತಿಗದ್ವಾಲ ವೇದಿಕೆಯಲ್ಲಿದ್ದರು.ಆರಂಭದಲ್ಲಿ ಅಂಬಿಕಾ ರೆಡ್ಡಿ ಸ್ವಾಗತಿಸಿದರು.ನೇತ್ರಾವತಿಉಟಗಿ ನಿರೂಪಿಸಿದರು.ನಾಗಮ್ಮ ಶಿರೂರ ವಂದಿಸಿದರು.
ಸಮಾರಂಭದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಕು.ಆರಾಧ್ಯ ಪ್ರಸ್ತುತಪಡಿಸಿದ ಭರತನಾಟ್ಯಎಲ್ಲರ ಶ್ಲಾಘನೆಗೆ ಪಾತ್ರವಾಯಿತು.