ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ:ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಏಕಗವಾಕ್ಷಿ ಕೋಶ ಆರಂಭ
ಕಲಬುರಗಿ:ಮಾ.20:ಕಲಬುರಗಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳಿಗೆ, ಸಭೆ-ಸಮಾರಂಭ, ರ್ಯಾಲಿ ಹಾಗೂ ಇತ್ಯಾದಿಗಳಿಗೆ ಪರವಾನಿಗೆ ಪಡೆಯಲು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಏಕಗವಾಕ್ಷಿ ಕೋಶವನ್ನು ತೆರೆಯಲಾಗಿದ್ದು, ಏಕಗವಾಕ್ಷಿ ಕೋಶದ ಮೊಬೈಲ್ ಸಂಖ್ಯೆ 9148175498 ಇರುತ್ತದೆ ಎಂದು 44-ಗುಲಬರ್ಗಾ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ರಾದ ಮಾಧವ ಗಿತ್ತೆ ಅವರು ತಿಳಿಸಿದ್ದಾರೆ.
ದೂರು ಉಸ್ತುವಾರಿ ಕೋಶ: ಸಾರ್ವಜನಿಕರು ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದೂರವಾಣಿ ಅಥವಾ ಇ-ಮೇಲ್ ಮೂಲಕ ದೂರು ಉಸ್ತುವಾರಿ ಕೋಶಕ್ಕೆ ದೂರು/ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ದೂರು ಉಸ್ತುವಾರಿ ಕೋಶದ ಮೊಬೈಲ್ ಸಂಖ್ಯೆ 9886409292 ಹಾಗೂ ಇ-ಮೇಲ್ 44glbdakshin@gmail.com ಇರುತ್ತದೆ.
ಸಿ-ವಿಜಿಲ್: ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿ-ವಿಜಿಲ್ ಆ್ಯಪ್ ಮೂಲಕ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ. ಸಿ-ವಿಜಿಲ್ ಮೊಬೈಲ್ ಸಂಖ್ಯೆ 9019410909 ಹಾಗೂ ಹೆಲ್ಪ್‍ಲೈನ್ ನಂಬರ್ 08472-240364 ಇರುತ್ತದೆ ಎಂದು ಅವರು ತಿಳಿಸಿದ್ದಾರೆ.