ಪ್ಯಾಲಿಸ್ತೇನ್ ಪರ ಘೋಷಣೆ, ಬಾವುಟ ಹಾರಾಟ ದೇಶ ವಿರೋಧಿ ಚಟವಟಿಕೆಗೆ ಖಂಡನೆ
ಕೋಲಾರ,ಸೆ,೧೮-ಪ್ಯಾಲಿಸ್ತೇನ್ ಪರವಾಗಿ ಘೋಷಣೆ ಕೂಗಿ ಬಾವುಟ ಹಾರಿಸಿ ದೇಶ ವಿರೋಧಿ ಚಟವಟಿಕೆ ಮಾಡಿದಕ್ಕೆ ಖಂಡಿಸಿದ ಅವರು, ರಾಮ ಮಂದಿರ ಉದ್ಘಾಟನೆ, ಗಣೇಶ ಪ್ರತಿಷ್ಟಾಪನೆಗೂ ಅನುಮತಿ ಕಡ್ಡಾಯ ಇದೆ, ಆದ್ರೆ ಕ್ಲಾಕ್ ಟವರ್ ನಲ್ಲಿ ಯಾವುದೆ ಅನುಮತಿ ಪಡೆದಿಲ್ಲ, ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಏಜೆಂಟ್ ರಂತೆ ದೇಶ ವಿರೋಧಿಗಳಿಗೆ ಆಶ್ರಯ ನೀಡಿದೆ ಕಾಂಗ್ರೆಸ್ ಸರ್ಕಾರ, ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ, ವಿಧಾನಸೌಧ ದಲ್ಲಿ ಸಹ ಪಾಕಿಸ್ತಾನ ಜಿಂದಾಬಾದ್ ಕೂಗಲಾಗಿತ್ತು, ಕೋಲಾರದಲ್ಲಿ ಇಷ್ಟೆಲ್ಲಾ ಆದರೂ ಜಿಲ್ಲಾ ರಕ್ಷಣಾಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂದ ಟಿಪ್ಪು ಸುಲ್ತಾನ್ ಬ್ಯಾನರನ್ನ ಅನುಮತಿ ಇಲ್ಲದೆ ಹಾಕಲಾಗಿದೆ, ಇದರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ, ದೇಶ ದ್ರೋಹಿಗಳು ಪಾಕಿಸ್ತಾನಕ್ಕೆ ಹೋಗಲಿ, ರಾಹುಲ್‌ಗಾಂಧಿ ಯುಎಸ್‌ಎನಲ್ಲಿ ರಾಹುಲ್ ಗಾಂಧಿ ಮೀಸಲಾತಿಯನ್ನ ತೆಗೆಯುತ್ತೇವೆ ಎನ್ನುತ್ತಾರೆ ಎಂದು ಹೇಳಿದರು.
ಕೋಲಾರದಲ್ಲಿ ಮುಸ್ಲಿಂ ಸಮುದಾಯದಲ್ಲೇ ಗುಂಪುಗಳಾಗಿದ್ದು, ದೇಶ ಪರ ವಿರೋಧ ಗಲಾಟೆ ಆಗಿದೆ, ಪ್ಯಾಲೇಸ್ತೇನ್ ಬಾವುಟ ಹಾರಿಸಿದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಕೋಲಾರದಲ್ಲಿ ಹಸುಗಳ ಮೇಲೆ ಆಸಿಡ್ ಹಾಕುತ್ತಾರೆ, ಕೋಲಾರದಲ್ಲಿ ಸಾಕಷ್ಟು ಜನರು ದೇಶದ ಬಾವುಟ ಹಾಕಲ್ಲ, ಬದಲಾಗಿ ಅಟೋ ಸೇರಿದಂತೆ ಎಲ್ಲೆಡೆ ಯಾವುದೊ ಬಾವುಟಗಳನ್ನ ಹಾಕಿಕೊಳ್ಳಲಾಗುತ್ತಿದೆ, ದೇಶ ವಿರೋಧಿಗಳಿಗೆ ಕಾಂಗ್ರೆಸ್ ಸರ್ಕಾರ ಆಶ್ರಯ ಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಕಾಂಗ್ರೆಸ್ ಸರ್ಕಾರ ಇರಬಹುದು ಆದರೆ ಮುಂದೆ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಇದರಲ್ಲಿ ಕೇರಳ, ಪಾಕಿಸ್ತಾನ ಕೈವಾಡ ಇದ್ಯಾ, ಐಸಿಸ್ ಪಾತ್ರ ಇದಿಯಾ ತನಿಖೆಯಾಗಬೇಕು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಶಾಸಕರ ಮನೆಗೆ ಬೆಂಕಿ ಹಾಕಿದರು, ಆದರೆ ಅಂದು ನೀವು ನಮಗೆ ಓಟ್ ಹಾಕಿ ನಿಮ್ಮ ಪ್ರಕರಣ ಇತ್ಯರ್ಥ ಮಾಡುತ್ತೇವೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವೆ ಎಚ್ಚರಿಕೆ ನೀಡಿದ ಅವರು ಬೇರೆ ದೇಶದ ಪರವಾಗಿ ಘೋಷಣೆ ಕೂಗುವ ಕಿಡಿಗೇಡಿಗಳು ಎಲ್ಲಿಗೆ ಕರೆದರೂ ಬರುತ್ತೇವೆ, ಬಂಟ್ವಾಳ ಸೇರಿದಂತೆ ಎಲ್ಲಿಗೆ ಕರೆದರೂ ನಾನು ಬರುತ್ತೇನೆ, ಕೋಲಾರ ನಗರದ ಕ್ಲಾಕ್ ಟವರ್ ಭಾರತದ ಬಾವುಟ ಹಿಡಿದು ಹೋರಾಟ ಮಾಡುವೆ ಎಂದರು.
ಶಾಸಕ ಮುನಿರತ್ನ ಬಂಧನ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಮುನಿರತ್ನ ತಪ್ಪು ಮಾಡಿದ್ದೇ ಆದರೆ ಅವರದ್ದೇ ಆಡಿಯೋ ಆಗಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ, ಯಾವುದೇ ಸಮುದಾಯ, ಹೆಣ್ಣು ಮಕ್ಕಳ ವಿರುದ್ದ ಮಾತನಾಡುವುದು ತಪ್ಪು ವಿಚಾರಣೆಯಲ್ಲಿ ಅವರು ತಪ್ಪು ಮಾಡಿದರೆ ಕ್ರಮ ಆಗಲಿ ಎಂದು ಅಭಿಪ್ರಾಯ ಪಟ್ಟರು.