ರಮೇಶ್ ಕುಮಾರ್‌ರಿಂದ 19.25ಎಕರೆ ಗುಂಟೆ ಜಮೀನು ಒತ್ತುರಿ ಸರ್ವೆಯಲ್ಲಿ ಧೃಡ
ಕೋಲಾರ.ಸೆ,೧೮-ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸುಪರ್ದಿ ಯಲ್ಲಿರುವ ಸುಮಾರು ೧೯ ಎಕರೆ ೨೫ ಗುಂಟೆ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಧೃಡ ಪಡೆಸಿರುವುದರಿಂದ ಒತ್ತುವರಿ ತೆರವು ತೊಗುಗತ್ತಿಯಾಗಿ ಪರಿಣಾಮಿಸಿದೆ.
ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮಕ್ಕೆ ಸೇರಿದ ೫ ಕಡತಗಳಿಗೆ ಸಂಬಂಧಪಟ್ಟ ಈ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಪ್ರದೇಶಗಳಿಗೆ ಒಳಪಟ್ಟಿರುವುದರಿಂದ ಪುನರ್ ನಿರ್ಮಾಣ ಮಾಡಲು ಸೂಕ್ತವಾಗಿರುವುದಿಲ್ಲ ಎಂದು ಭೂ ದಾಖಲೆಗಳ ಉಪನಿರ್ದೇಶಕರು ಕಳೆದ ಜುಲೈ ೧೬ ರಂದು ಶ್ರೀನಿವಾಸಪುರ ತಾಲ್ಲೂಕು ತಹಸೀಲ್ದಾರ್ ಅವರಿಗೆ ಬರೆದಿರುವ ಪತ್ರದ ದಾಖಲೆಯನ್ನು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಬಹಿರಂಗ ಪಡೆಸಿದ್ದಾರೆ.
ಮಾಜಿ ಸ್ಫೀಕರ್ ಕೆ.ಆರ್.ರಮೇಶ್ ಕುಮಾರ್ ಹಾಲಿ ತಮ್ಮ ಸುಪರ್ದಿಯಲ್ಲಿರುವ ಹೊಸಹುಡ್ಯ ಗ್ರಾಮದ ಸ.ನಂ.೨ ರಲ್ಲಿನ ಬಾಕಿ ಇರುವ ೫ ಜಮೀನುಗಳ ಕಡತಗಳು ಕೈ ತಪ್ಪಿರುವ ಕಡತಗಳನ್ನು ಪೋಡಿ ದುರಸ್ತಿ ಕಾರ್ಯ ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯ ದಾವೆಯನ್ನು ಸಲ್ಲಿಸಿ ಆದೇಶದ ಪ್ರಕಾರ ಕ್ರಮ ಜರುಗಿಸ ಬೇಕೆಂದು ಮನವಿ ಮಾಡಿ ಕೊಂಡಿದ್ದಾರೆ.
ಈ ಆದೇಶದ ಪ್ರಕಾರ ಕೋಲಾರ ವಿಭಾಗಾಧಿಕಾರಿಗಳ ಸಹಾಯಕ ಆಯುಕ್ತರ ೨೦೧೬ ರ ವರದಿಯಂತೆ ಬಾಕಿ ಇರುವ ೫ ವಿಷಯಗಳಿಗೆ ಸಂಬಂಧಿಸಿದಂತೆ ಗೈರು ವಿಲೇ ಅಗಿರುವ ಕಡತಗಳನ್ನು ಪುನರ್ ನಿರ್ಮಾಣ ಮಾಡುವ ಬಗ್ಗೆ ೩ ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ನ್ಯಾಯಾಲಯದಿಂದ ಆದೇಶವಾಗಿರುವಂತೆ ಕ್ರಮವಹಿಸಲು ಮನವಿ ಸಲ್ಲಿಸಿದ್ದರು,
ರಮೇಶ್ ಕುಮಾರ್ ಅವರ ಮನವಿಯಂತೆ ಹಾಗೂ ಉಚ್ಚ ನ್ಯಾಯಾಲಯದ ಅದೇಶದಂತೆ ಕ್ರಮವಹಿಸಲು ಭೂ ದಾಖಲೆಗಳ ಉಪ ನಿರ್ದೇಶಕರು ಗೈರು ವಿಲೇ ಕಡತಗಳ ಪುನರ್ ನಿರ್ಮಾಣ ಸಮಿತಿಯ ಆದೇಶವನ್ನು ಪರಿಶೀಲಿಸಲಾಗಿ ಮಂಜೂರಾತಿ ದಾಖಲೆಗಳು ಮತ್ತು ಇತರೇ ದಾಖಲೆಗಳು ಲಭ್ಯವಿಲ್ಲದ ಕಾರಣದಿಂದ ಮತು ಮಂಜೂರಾತಿ ದಾಖಲಾತಿಗಳನ್ನು ಪರಿಶೀಲಿಸುವಂತೆ ಶ್ರೀನಿವಾಸಪುರ ತಹಸೀಲ್ದಾರ್ ಹಾಗೂ ಕೋಲಾರದ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದರು
ರಮೇಶ್ ಕುಮಾರ್ ಪುನರ್ ನಿರ್ಮಾಣಕ್ಕೆ ಕೋರಿದ್ದ ೫ ಜಮೀನುಗಳಿಗೆ ಸಂಬಂಧ ಪಟ್ಟ ಸಂಕ್ಷಿಪ್ತ ವರದಿಯನ್ನು ಸಲ್ಲಿಸಲು ಶ್ರೀನಿವಾಪುರ ತಹಸೀಲ್ದಾರ್‌ಗೆ ೦೨-೦೪-೨೦೨೪ ರಂದು ಪತ್ರ ಬರೆದು ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗಳು ಸೂಚಿಸಿದ್ದರು. ಅದರ ಪ್ರಕಾರ ತಹಸೀಲ್ದಾರ್ ಅವರು ೦೪-೦೫-೨೦೨೪ ರಂದು ವರದಿಯನ್ನು ಸಲ್ಲಿಸಿದ್ದರು,