ಮುಲ್ಲಾಮರಿ ಆಣೆಕಟ್ಟೆಯಿಂದ ಕಾಲುವೆಗೆ ನೀರು ಹರಿಸಲು ಮನವಿ
ಚಿಂಚೋಳಿ,ಮಾ.20- ತಾಲೂಕಿನ ಮುಲ್ಲಾಮರಿ ಆಣೆಕಟ್ಟೆಯಿಂದÀ ನೀರನ್ನು ಕಾಲುವೆಗಳಿಗೆ ಹಳ್ಳಕ್ಕೆ ಬಿಡುವ ಮೂಲಕ ಬೆಸಿಗೆ ಕಾಲ ಮುಗಿಯುವ ತನಕ ದನ ಕರುಗಳಿಗೆ ಅನುಕೂಲ ಆಗುತ್ತದೆ ಎಂದು ಆಣೆಕಟ್ಟಿನಿಂದ ನಾಲೆಗೆ ನೀರು ಬಿಡುವ ಕುರಿತು ಚಿಮ್ಮನಚೋಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಲ್ಲಿಕಾರ್ಜುನ್ ರೆಡ್ಡಿ ನರನಾಳ, ಅವರ ನೇತೃತ್ವದ ನಿಯೋಗ ತಹಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ.
ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿದ ಮಲ್ಲಿಕಾರ್ಜುನ್ ರೆಡ್ಡಿ ನರನಾಳ, ಅವರು, ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೂ ಮತ್ತು ತಾಂಡಾಗಳ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದೆ. ದಿನೆ ದಿನೆ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು, ಭೀಕರ ಬರಗಾಲ ಇದ್ದು, ದನಕರುಗಳಿಗೆ ಕುಡಿಯಲು ನೀರಿಲ್ಲದ ಕಾರಣ ಬೆಸಿಗೆ ಮುಗಿಯುವ ತನಕ ಮುಲ್ಲಾಮರಿ ನಾಲಕ್ಕೆ ನೀರು ಹರಿಸಲು ಸಂಭಂದ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕೇಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಮ್ಮನಚೋಡ ಗ್ರಾಮದ ಮುಖಂಡರಾದ ಬಂಡ ರೆಡ್ಡಿ,ರಾಮರೆಡ್ಡಿ ಪೆÇಲೀಸ್ ಪಾಟೀಲ್, ಶಿವಕುಮಾರ ಸ್ವಾಮಿ, ನರಸಪ್ಪ, ಸಂಘ ರೆಡ್ಡಿ, ಇದ್ದರು