ಜಿಎನ್‍ಡಿಇಸಿ: 5 ದಿನಗಳ ಎಫ್‍ಡಿಪಿಗೆ ಚಾಲನೆ
ಬೀದರ,ಮಾ. 20: ಇಲ್ಲಿನ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಮತ್ತು ಸಿಇ ಮತ್ತು ಡೇಟಾ ಸೈನ್ಸ್ ವಿಭಾಗದಿಂದ ಪರಿಣಾಮಕಾರಿ ಬೋಧನಾ ತಂತ್ರಗಳ ಕುರಿತು ಐದು ದಿನಗಳ ಎಮರ್ಜಿಂಗ್ ಟೆಕ್ನಾಲಜೀಸ್ ,ಗ್ರ್ಯಾಂಟ್ ರೈಟಿಂಗ್ ಮತ್ತು ಐಪಿಆರ್ ರೈಟ್ಸ್ -ಫ್ಯಾಕಲ್ಟಿ ಡೆವಲಪ್‍ಮೆಂಟ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಯಿತು.
ಬೀದರ್ ಕರ್ನಾಟಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಹಂಗರಗಿ ಮುಖ್ಯ ಅತಿಥಿಯಾಗಿದ್ದರು. ಗುರುನಾನಕ್ ಸಮೂಹ ಸಂಸ್ಥೆ ಉಪಾಧ್ಯಕ್ಷೆ ಡಾ.ರೇಷ್ಮಾಕೌರ್ ಜಿ ಅವರು ಗೌರವ ಅತಿಥಿಯಾಗಿದ್ದರು.
ಡಾ.ಹಂಗರಗಿಯವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಸ್ವಾಯತ್ತ ವಿಧಾನದ ಬಗ್ಗೆ ಒತ್ತು ನೀಡಿದರು.ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಸ್ಟಮೈಸ್ ಮಾಡಿದ ಬೋಧನಾ ವಿಧಾನಗಳನ್ನು ರೂಪಿಸುವ ಅಗತ್ಯದ ಬಗ್ಗೆ ಮಾತನಾಡಿದರು.
ಡಾ. ರೇಷ್ಮಾ ಕೌರ್ ಜಿ ಅವರು ಮಾತನಾಡಿ,ವಿಷಯವು ಅತ್ಯಂತ ಸೂಕ್ತವಾದ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಲು ಶಿಕ್ಷಕರ ಪಾತ್ರದ ಪ್ರಾಮುಖ್ಯತೆ ಮತ್ತು ಕಾರ್ಯಕ್ಷಮತೆಯನ್ನು ಕುರಿತು ನುಡಿದರು.
ಜಿಎನ್‍ಡಿಇಸಿ ಪ್ರಿನ್ಸಿಪಾಲ್ ಡಾ.ಧನಂಜಯ್ ಎಂ, ಇ ಮತ್ತು ಸಿಇ ವಿಭಾಗದ ಎಚ್‍ಒಡಿ, ಡಾ.ಕಿಶನ್ ಸಿಂಗ್, ಮತ್ತು ಡಾಟಾ ಸೈನ್ಸ್‍ನ ,ಎಚ್‍ಒಡಿ ಡಾ.ವೀರೇಂದ್ರ ಡಿ ಉಪಸ್ಥಿತರಿದ್ದರು.