ಎಟಿಎಂ ಒಡೆದು 9 ಲಕ್ಷ ರೂ. ಕದ್ದೊಯ್ದ ಕಳ್ಳರು
ಚಿಂಚೋಳಿ,ಮಾ.20-ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಪಿಕೆಜಿಬಿ ಬ್ಯಾಂಕ್ ಬಳಿ ಇರುವ “ಇಂಡಿಯಾ ಒನ್” ಎಟಿಎಂಗೆ ಕನ್ನ ಹಾಕಿರುವ ಕಳ್ಳರು ಎಟಿಎಂ ಒಡೆದು 9 ಲಕ್ಷ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಸುದ್ದಿ ತಿಳಿದು ಡಿವೈಎಸ್‍ಪಿ ಸಂಗಮನಾಥ ಹಿರೇಮಠ, ಸಿಪಿಐ ಹೆಚ್.ಎಲ್.ಗೌಂಡಿ, ಪಿಎಸ್‍ಐ ಸಿದ್ದೇಶ್ವರ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಟಿಎಂ ದೋಚಿದ ಕಳ್ಳರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.