ನಗರಾಭಿವೃದ್ಧಿ ಯೋಜನಾ ನಿರ್ದೇಶಕರ ಅಮಾನತ್ತಿಗೆ ಒತ್ತಾಯ
ಬೀದರ್,ಮಾ.20-ಇಲ್ಲಿನ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಪೌರಾಡಳಿತ ಸಚಿವರ ನಿರ್ದೇಶನದ ಪತ್ರಕ್ಕೆ ಕಿಮ್ಮತ್ತುಕೊಡದೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ 50 ಪೌರಕಾರ್ಮಿಕರ ನೇಮಕ ಮಾಡಿಕೊಂಡಿದ್ದಾರೆ ಮತ್ತು ಕೆಲವು ಪೌರಕಾರ್ಮಿಕರನ್ನು ತನ್ನ ಮನೆಯಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ವೀರ ಕನ್ನಡಿಗರ ಸೇನೆ ಜಿಲ್ಲಾ ಘಟಕ ಈ ಸಂಬಂಧ ಜಿಲ್ಲಾ ನಗರಾಭಿವೃದ್ಧಿ ಯೋಜನ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದೆ.
ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್, ಕಾರ್ಯಾಧ್ಯಕ್ಷ ನಾಗೇಶ, ಸೈನೆ ತಾಲ್ಲೂಕಾಧ್ಯಕ್ಷ ಅಂಬಾದಾಸ, ಸಂದೀಪ ಚಾಂಬೋಳ, ದೇವರಾಜ ಪಂತಗೆ, ರಾಹುಲ ಬೌದ್ಧೆ, ಬಸವರಾಜ ಜಡಗೆ, ಕರಣ ಜಡಗೆ, ಹಾಗೂ ಕಾರ್ಯಕರ್ತರು ಇದ್ದರು.