ಟಂಟಂನಿಂದ ಬಿದ್ದು ವ್ಯಕ್ತಿ ಸಾವು
ಯಡ್ರಾಮಿ,ಮಾ.20-ನಾಗರಹಳ್ಳಿ-ಯಡ್ರಾಮಿ ಮಾರ್ಗದ ಮಧ್ಯೆ ಕೆಂಪು ಹಳ್ಳದ ಹತ್ತಿರ ಟಂಟಂ ಅಪಘಾತವಾಗಿ ಬೆಣ್ಣೂರು ಗ್ರಾಮದ ಭೀಮರಾಯ ತಂದೆ ಯಮನಪ್ಪ ನಾಯ್ಕೊಡಿ (58) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಗರಹಳ್ಳಿ ಮಾರ್ಗವಾಗಿ ಸುರಪುರ ತಾಲೂಕಿನ ಐವೂರ ಗ್ರಾಮದಲ್ಲಿರುವ ಮಗಳ ಮನೆಗೆ ಟಂಟಂನಲ್ಲಿ ಹೋಗುತ್ತಿದ್ದಾಗ ಕೆಳಗ ಬದ್ದು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಗೆ ಏಳು ಜನ ಹೆಣ್ಣು ಮಕ್ಕಳು ಇದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ವಾಹನ ಚಾಲಕ ವಾಹನ ಬಿಟ್ಟು ಓಡಿಹೋಗಿದ್ದಾನೆ. ವಾಹನದ ಮಾಲಿಕ ಮತ್ತು ಚಾಲಕ ಯಾರು ಎಂದು ತಿಳಿದು ಬಂದಿಲ್ಲ.
ಸ್ಥಳದಲ್ಲಿಯೇ ಬಿಟ್ಟು ಹೋದ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಸಂಭಂದಿಕರಿಗೆ ಮೃತ ದೇಹವನ್ನು ಒಪಿಸಲಾಗಿದೆ ಎಂದು ಠಾಣೆಯ ಪಿ.ಎಸ್.ಐ ವಿಶ್ವನಾಥ ರೆಡ್ಡಿ ತಿಳಿಸಿದ್ದಾರೆ.