ನೀರಿನ ಅಭಿಯಾನಕ್ಕೆ ಚಾಲನೆ
ಕಲಬುರಗಿ,ಮಾ.20: ವಿಶ್ವ ಜಲ ದಿನಾಚರಣೆಯ ಪ್ರಯುಕ್ತ ಇಂದು ಕಲಬುರಗಿ ತಾಲೂಕು ಪಂಚಾಯತ್ ಆವರಣದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಯ್ಯದ್ ಪಟೇಲ್ ಅವರು ವಾಟರ್ ಏಡ್ ಇಂಡಿಯಾ ಸಂಸ್ಥೆಯ ನೀರಿನ ಅಭಿಯಾನಕ್ಕೆ ಚಾಲನೆ ನೀಡಿದರು.
ನೀರನ್ನು ಉಳಿಸಿ ಜೀವವನ್ನು ಉಳಿಸಿ ಎಂದು ಮನವಿ ಮಾಡಿದರು. ಸಿಬ್ಬಂದಿಗಳಾದ ಅಭಯರಾಜ್, ಭೀಮರಾವ್, ಶಿವಲೀಲಾ, ಶಿವಕುಮಾರ್, ಶಶಿಕಾಂತ್, ನಾಗರೆಡ್ಡಿ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಾಟರ್ ಏಡ್ ಇಂಡಿಯಾ ಸಂಸ್ಥೆ ಕಳೆದ 30ವರ್ಷಗಳಿಂದ ವಾಶ್ ಯೋಜನೆಗಳನ್ನು ಜಗತ್ತಿನಾದ್ಯಂತ 24 ದೇಶಗಳಲ್ಲಿ ಅನುಷ್ಠಾನ ಮಾಡುತ್ತಿದೆ. ಭಾರತದಲ್ಲಿ 13 ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ 7 ಜಿಲ್ಲೆಗಳಲ್ಲಿ ಕಳೆದ 6 ತಿಂಗಳುಗಳಿಂದ ಅನುಷ್ಠಾನ ಮಾಡಿಕೊಂಡು ಬರುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಆಯ್ದ 10 ಪಂಚಾಯತ್ ಗಳಲ್ಲಿ ಅಮೃತವರ್ಷಿಣಿ ಎಂಬ ಹೆಸರಿನಲ್ಲಿ ಅನುಷ್ಠಾನ ಮಾಡುತ್ತಿದೆ. ಬೆಣ್ಣೆತೊರೆ ನದಿ ತಟದ ಮೇಲುಭಾಗದ ಪ್ರದೇಶಗಳಲ್ಲಿ ನೀರನ್ನು ಭೂಮಿಗೆ ಇಂಗಿಸುವ ಮುಖೇನ ಅಂತರಜಲ ಮಟ್ಟವನ್ನು ಹೆಚ್ಚಿಸುವ ಘನ ಉದ್ದೇಶವನ್ನು ಸಂಸ್ಥೆ ಹೊಂದಿದೆ.