ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ನಗದು ಜಪ್ತಿ
ವಿಜಯಪುರ,ಮಾ20: ಲೋಕಸಭಾ ಚುನಾವಣೆ ಹಿನ್ನೆಲೆ ತಪಾಸಣೆ ವೇಳೆ, ಹೈದರಾಬಾದ್‍ನಿಂದ ಹುಬ್ಬಳ್ಳಿಗೆ ಟೋಯೊಟಾ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ನಗದು ನಗರದ ಸಿಂದಗಿ ಬೈಪಾಸ್ ಬಳಿ ಪೆÇಲೀಸರು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಜಿ ನಿಕ್ಕಂ, ಸಚಿನ್ ಮೋಯಿತೆ ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ 2 ಕೋಟಿ 93 ಲಕ್ಷದ 50 ಸಾವಿರ ನಗದು, ಟೋಯೋಟಾ ಕಾರು, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.
ಈ ಕುರಿತು ಗೋಳಗುಮ್ಮಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.