ಲಕ್ಷ್ಮಿಗೆ ಪಿಎಚ್‍ಡಿ ಪ್ರದಾನ
ವಿಜಯಪುರ:ಮಾ.20: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಲಕ್ಷ್ಮಿ ಅಂಗಡಿ ಅವರು ಸಲ್ಲಿಸಿದ್ದ “ಕನ್ನಡ ಕಾವ್ಯದಲ್ಲಿ ಬಸವಣ್ಣ: ಒಂದು ಅಧ್ಯಯನ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ಲಕ್ಷ್ಮಿ ಅಂಗಡಿ ಅವರು ಕನ್ನಡ ಅಧ್ಯಯನ ವಿಭಾಗದ ಪ್ರೊ. ವಿಜಯಶ್ರೀ ಸಬರದ(ನಿವೃತ್ತ) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಲಕ್ಷ್ಮಿ ಅಂಗಡಿ ಅವರನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲ ಸಚಿವ ಪ್ರೊ. ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.