ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಜಯಂತಿ
ಬೀದರ, ಮಾ.20: ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಜಯಂತಿಯನ್ನು ದಿನಾಂಕ: 22-03-2024 ರಂದು ಶುಕ್ರವಾರದಂದು ಸಾಯಂಕಾಲ 6.00 ಗಂಟೆಗೆ ಬೀದರ ನಗರದ ಕುಂಬಾರವಾಡದಲ್ಲಿರುವ ಶ್ರೀ ಬೀರಲಿಂಗೇಶ್ವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದಿನ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭಾಲ್ಕಿ ತಾಲೂಕಿನ ಉಚ್ಛ ಗ್ರಾಮದಬೀರಲಿಂಗೇಶ್ವರ ಮಠದ ಶ್ರೀ ಗೋಪಾಲ ಮಹಾರಾಜರ ವಹಿಸಲಿದ್ದಾರೆ. ಆದ್ದರಿಂದ ಬೀದರ ಜಿಲ್ಲೆಯ ಗೊಂಡ ಸಮಾಜದ ಸಕಲ ಸದ್ಭಕ್ತರು ತಮ್ಮ ತಮ್ಮ ಮನೆಯಲ್ಲಿ ಜಗದ್ಗುರು ರೇವಣಸಿದ್ಧೇಶ್ವರರ ಜಯಂತಿ ಹಾಗೂ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ 6.00 ಗಂಟೆಗೆ ಶ್ರೀ ಬೀರಲಿಂಗೇಶ್ವರ ಮಂದಿರದಲ್ಲಿ ಪಾಲ್ಗೊಂಡು ಜಯಂತಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕೆಂದು ಶ್ರೀ ಗೋಪಾಲ ಮಹಾರಾಜರು ಸಕಲ ಸದ್ಭಕ್ತರಲ್ಲಿ ವಿನಂತಿಸಿರುತ್ತಾರೆ.