ಗ್ರಾಮೀಣ ಜನತೆ ಎಸ್ ಬಿ ಐ ನ ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ
ಕಲಬುರಗಿ: ಮಾ,20: ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ (ನಾಮ ನಿರ್ದೇಶಿತ) ಫಲಾನುಭವಿ ಮಹಾನಂದಾಗೆ 2 ಲಕ್ಷ ರೂಪಾಯಿ ಚೆಕ್ ಶಾಖಾ ವ್ಯವಸ್ಥಾಪಕ ಸುರೇಶ ಇದ್ಲಾಯಿಕರ್ ವಿತರಣೆ ಮಾಡಿದರು.ಎಸ್ ಬಿ ಐ ಬ್ಯಾಂಕ್ ವಾರ್ಷಿಕ 20 ರೂಪಾಯಿ ವಿಮೆ ಮಾಡಿಸಿದರೆ ಸಿಡಿಲು ಬಡಿತ, ಹಾವು ಕಚ್ಚಿ ಸಾವು, (ವಾಹನ) ಅಪಘಾತ (ಮತ್ತು ಇತರ ಆಕಸ್ಮಿಕ )ಸಾವುಗಳು ಸಂಭವಿಸಿದರೆ ಪ್ರಧಾನಮಂತ್ರಿ (ಸುರಕ್ಷಾ) ಭೀಮಾ ಯೋಜನೆಯಡಿ (18 ರಿಂದ 70 ವರ್ಷ ವಯಸ್ಸಿನವರಿಗೆ) ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ )ವಿಮೆ ನೀಡಲಾಗುತ್ತಿದೆ, ಅಲ್ಲದೇ ವಾರ್ಷಿಕ 436 ರೂ. ವಿಮೆ ಮಾಡಿಸಿದರೆ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆಯಡಿ 18 ರಿಂದ 50 ವರ್ಷ ವಯಸ್ಸಿನವರಿಗೆ ಯಾವುದೇ ರೀತಿ ಸಾವನ್ನಪ್ಪಿದರೆ 2 ಲಕ್ಷ ರೂಪಾಯಿ ವಿಮೆ ಮೊತ್ತ ನೀಡಲಾಗುತ್ತಿದೆ, ಅಲ್ಲದೇ ವಿವಿಧ ವಯೋಮಾನದವರಿಗೆ ಪಿಂಚಣಿ ಯೋಜನೆ ಜಾರಿಯಲ್ಲಿವೆ, ಅಲ್ಲದೇ ಹಲವಾರು ಜನಪರ ಯೋಜನೆಗಳು ಜಾರಿಗೆ ತಂದಿದೆ, ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಾಗಾಂವ ಕ್ರಾಸ್ ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕ ಸುರೇಶ ಇದ್ಲಾಯಿಕರ್ ಹೇಳಿದರು.ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹಮ್ಮಿಕೊಂಡ ಚೆಕ್ ವಿತರಣೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಷ್ಟೇ ಕೋಟಿ ಹಣ ನೀಡಿದರೂ ಕಳೆದು ಹೋದ ಜೀವ ಮರಳಿ ಬರುವುದಿಲ್ಲ ನಿಜ, ಆದರೆ ಕುಟುಂಬಸ್ಥರ ಜೀವನ ನಿರ್ವಹಣೆಗೆ, ಶಿಕ್ಷಣ, ವಿವಾಹ ಮತ್ತಿತರ ಕೆಲಸಗಳಿಗೆ ಹಣ ಸಹಾಯವಾಗುತ್ತದೆ, ಪ್ರತಿಯೊಬ್ಬರು ವಿಮೆ ಹಾಗು ಪಿಂಚಣಿ ಯೋಜನೆ ಪಡೆದುಕೊಳ್ಳಬೇಕು ಎಂದರು.ನಿವೃತ್ತ ಪಿಯು ಕಾಲೇಜಿನ ಪ್ರಾಂಶುಪಾಲ ಸುಭಾಷ್ ಪಾರಾ ಮಾತನಾಡಿ ಬಡ ಜನತೆ ಹೆಚ್ಚಿನ ಮೊತ್ತದ ವಿಮೆ ಪಡೆಯಲು ಶಕ್ತರಿರುವುದಿಲ್ಲ, ಹೀಗಾಗಿ ಎಸ್ ಬಿ ಐ ಬ್ಯಾಂಕ್ ಬಡವರ ನೆರವಿಗಾಗಿ ವಿಮೆ ಜಾರಿಗೆ ತಂದಿದೆ, ನಾಳೆಯೇ ನಾನು ನನ್ನ ಕುಟುಂಬದ ಎಲ್ಲಾ ಸದಸ್ಯರ ವಿಮೆ ಮಾಡಿಸುತ್ತೇನೆ ಎಂದರು. ಕಾಳಗಿ ತಾಲೂಕಿನ ಶೆಳ್ಳಗಿ ಗ್ರಾಮದ ನಿವಾಸಿ ಸೂರ್ಯಕಾಂತ ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಯಡಿ ವಿಮೆ ಪಡೆದಿದ್ದರು, ವಾರ್ಷಿಕ 320 ಒಟ್ಟು 640 ರೂ.ಗಳನ್ನು ಕಟ್ಟಿದ್ದರು, ತದ ನಂತರ ಅನಾರೋಗ್ಯಕ್ಕೆ ತುತ್ತಾಗಿ ದಿನಾಂಕ 04.11.23 ಸಾವನಪ್ಪಿದ್ದರು,ಇದೀಗ ಅವರ ಪತ್ನಿ ಮಹಾನಂದಾಗೆ ಸೋಮವಾರ 2 ಲಕ್ಷ ರೂಪಾಯಿಗಳ ಚೆಕ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಕಮಲಾಪುರ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಶಿವಪ್ಪ ಚಿಂಚೋಳಿ, ಬ್ಯಾಂಕ್ ಸಿಬ್ಬಂದಿ ಅನೀಲ ಧವಾರೆ, ಇಸ್ಮಾಯಿಲ್ ಸೇಠ್, ಸಿದ್ದಣ್ಣ ಪೂಜಾರಿ, ವಿನೋದ, ಮಾರುತಿ, ರವಿರಾಜ ಇತರರು ಇದ್ದರು.