ಕೂಡ್ಲಿಗಿ ಸಮೀಪ ಕಾರು ಪಲ್ಟಿ – ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ ವಿಮ್ಸ್ ಗೆ ದಾಖಲು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.20 :- ಬೆಂಗಳೂರು ಕಡೆಯಿಂದ ಅಮೀನುಗಡ  ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿನ ಹತ್ತಿರ ಬಿದ್ದು ಪಲ್ಟಿಯಾಗಿರುವ ಪರಿಣಾಮ ಅದರಲ್ಲಿದ್ದ ನಾಲ್ವರು ತೀವ್ರಗಾಯಗೊಂಡಿದ್ದು ಅದರಲ್ಲಿ ಓರ್ವ  ಸ್ಥಳದಲ್ಲೇ ಮೃತಪಟ್ಟಿರೆ, ಮತ್ತೊರ್ವ  ಆಸ್ಪತ್ರೆಗೆ ಕರೆದೋಯ್ಯುವ ಮಾರ್ಗಮದ್ಯೆ ಮೃತಪಟ್ಟಿದ್ದಾನೆ ಹಾಗೂ ಮತ್ತಿಬ್ಬರು ಗಾಯಳುಗಳನ್ನು ಕೂಡ್ಲಿಗಿ ಆಸ್ಪತ್ರೆಯಿಂದ ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿರುವ ಘಟನೆ ಇಂದು ನಸುಕಿನ ಜಾವ 1-45ಗಂಟೆಗೆ  ಕೂಡ್ಲಿಗಿ ಸಮೀಪದ ಹೈವೇ 50ರ ರಸ್ತೆಯಲ್ಲಿ  ಮೊರಬ ಕ್ರಾಸ್ ಬಳಿ ಜರುಗಿದೆ.
ಬಾಗಲಕೋಟ ಜಿಲ್ಲೆಯ ಹುನುಗುಂದ ತಾಲೂಕಿನ ಅಮೀನುಗಡ  ನಗರ ಲಂಬಾಣಿ ತಾಂಡದವರಾದ  ಕರಣ್ (17) ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನ ಚಾಲಕ ಹಾಗೂ ಸಿವಿಲ್ ಇಂಜಿನಿಯರ್ ರಾಜು (36) ತೀವ್ರಗಾಯಗೊಂಡಿದ್ದು ಕೂಡ್ಲಿಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಮತ್ತು  ಪಿಯು ವಿದ್ಯಾರ್ಥಿ ಅಭಿಷೇಕ್ (17)ಹಾಗೂ ಮತ್ತೊರ್ವ ವಿದ್ಯಾರ್ಥಿ ಅಪ್ಪು ಚೌಹಾಣ್ (23) ಇಬ್ಬರಿಗೆ ತೀವ್ರ ಗಾಯವಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ.
ಘಟನಾ ವಿವರ : 
ಬೆಂಗಳೂರು ಕಡೆಯಿಂದ ತಮ್ಮ ಸ್ವಗ್ರಾಮ ಅಮೀನುಗಡ  ನಗರದ ಲಂಬಾಣಿ ತಾಂಡಾಕ್ಕೆ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು ಇಂದು ನಸುಕಿನ ಜಾವ 1-45ಗಂಟೆ ಸುಮಾರಿಗೆ ಚಾಲಕ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ರಾಜು ಅತಿವೇಗವಾಗಿ ಚಾಲನೆ ಮಾಡುತ್ತಿದ್ದು ಕೂಡ್ಲಿಗಿ ಸಮೀಪ ಮೊರಬ ಕ್ರಾಸ್ ಹತ್ತಿರದ ಹೆದ್ದಾರಿ 50ರ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಜಮೀನಿನಲ್ಲಿ ಹೋಗಿ ಬಿದ್ದು ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಕರಣ್ ಎಂಬಾತನಿಗೆ ತೀವ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನ ಚಾಲಕ ಇಂಜಿನಿಯರ್ ರಾಜು ಕೂಡ್ಲಿಗಿ ಆಸ್ಪತ್ರೆಗೆ ಕರೆದೋಯ್ಯುವ ಮಾರ್ಗದಲ್ಲಿ ಅಂಬ್ಯುಲೆನ್ಸ್ ನಲ್ಲಿ ಮೃತಪಟ್ಟಿದ್ದಾನೆ, ತೀವ್ರಗಾಯಗೊಂಡ ಮತ್ತಿಬ್ಬರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಎಂದು ತಿಳಿದಿದೆ.ಮೃತ ರಾಜು ಸಹೋದರ ಅಶೋಕ  ನೀಡಿದ ದೂರಿನಂತೆ ಕೂಡ್ಲಿಗಿ ಠಾಣಾ ಕ್ರೈಮ್ ಪಿಎಸ್ಐ ಸುಬ್ರಮಣ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಇಂದು ಬೆಳಿಗ್ಗೆ ವಿಜಯನಗರ ಜಿಲ್ಲೆಯ  ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಲೀಂ ಪಾಷಾ, ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ನೂತನ ಸಿಪಿಐ ವಿನಾಯಕ ಹಾಗೂ ಪಿಎಸ್ಐ ಧನುಂಜಯ ಸೇರಿದಂತೆ ಇತರರು  ಘಟನಾ ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.