ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ: ಮಾ. 20: ಮಾರ್ಚ್. 25 ರಿಂದ ಏಪ್ರಿಲ್. 6 ರ ವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗಳನ್ನು ಬೀದರ ಜಿಲ್ಲೆಯಲ್ಲಿ ಯಾವುದೇ ಅಹಿತಕತ ಘಟನೆಗಳನ್ನು ನಡೆಯದಂತೆ ಸುಸೂತ್ರವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಬೇಕು ಹಾಗೂ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಒಬ್ಬ ಪ್ಲಾಯಿಂಗ್ ಸ್ಕ್ವಾಡ ಇರಬೇಕು. ಈ ಸಲ ಬೀದರ ಜಿಲ್ಲೆಯಲ್ಲಿ ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುತ್ತಿರುವದರಿಂದ ಯಾವುದೇ ಗೊಂದಲಗಳಾಗದಂತೆ ನೋಡಿಕೊಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಸಲೀಂ ಪಾಶಾ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಮಾತನಾಡಿ, ಈ ಸಲ ತುಂಬಾ ಸ್ಟ್ರೀಕಟ್ ರೂಲ್ಸ್ ಬಂದಿದೆ ತಾವು ಏನು ಮಾಡಿದರು ಅದು ಸಿ.ಸಿ.ಟಿ.ವಿ ಯಲ್ಲಿ ರೆಕಾರ್ಡ್ ಆಗುತ್ತದೆ ಹಾಗಾಗಿ ಪರೀಕ್ಷೆಗಳಲ್ಲಿ ಯಾವುದೇ ನಕಲು ನಡೆಯದಂತೆ ಎಚ್ವರಿಕೆ ವಹಿಸಬೇಕೆಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಸಲೀಂ ಪಾಷಾ ಮಾತನಾಡಿ ಮಾರ್ಚ್. 25 ರಂದು ಪ್ರಥಮ ಭಾಷಾ ಪರೀಕ್ಷೆಗಳು. 27 ರಂದು ಸಮಾಜ ವಿಜ್ಞಾನ ಪರೀಕ್ಷೆ ಹಾಗೂ 30 ರಂದು ವಿಜ್ಞಾನ ಮತ್ತು ಏಪ್ರಿಲ್. 2 ರಂದು ಗಣಿತ. 3 ರಂದು ಅರ್ಥಶಾಸ್ತ್ರ ( ಅಂಧ ಮಕ್ಕಳಿಗೆ ) 4 ರಂದು ತೃತೀಯ ಭಾಷೆ ಹಾಗೂ 6 ರಂದು ದ್ವೀತಿಯ ಭಾಷೆಗಳ ಪರೀಕ್ಷೆ ನಡೆಯಲಿದ್ದು. ಜಿಲ್ಲೆಯ 560 ಶಾಲೆಗಳಲ್ಲಿ ಮಕ್ಕಳು ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ ಎಂದರು.
ಫ್ರೆಷರ್ 27194 ಹಾಗೂ ರಿಅಫೀಯರ್ 2451 ಸೇರಿ ಒಟ್ಟು 29645 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 90 ಪರೀಕ್ಷಾ ಕೇಂದ್ರಗಳಿದ್ದು. 16 ಸೆನ್ಸಿಟಿವ್. 5 ವೇರಿ ಸೆನ್ಸಿಟಿವ್ ಕೇಂದ್ರಗಳಿವೆ. ಒಟ್ಟು ಕೋಣೆಗಳು 1309 ಇವೆ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್,. ಹೆಚ್ಚುವರಿ ಪೆÇಲೀಸ್ ಅಧಿಕ್ಷಕರಾದ ಮಹೇಶ ಮೇಘಣ್ಣವರ, ಡಿವೈಎಸ್ಪಿ ಶಿವನಗೌಡ ಪಾಟೀಲ್, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಅಧಿಕ್ಷಕರು, ಉಪ ಮುಖ್ಯ ಅಧಿಕ್ಷಕರು, ಬಿ.ಇ.ಓ. ತಹಶಿಲ್ದಾರರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.