ಜಿಂದಾಲ್ ಗೆ ನೀರು ಬಿಟ್ಟರೇ : ರೈತರು ಹಾಗೂ ಕನ್ನಡ ಪರ ಸಂಘಟನೆಗಳಿಂದ ಹೋರಾಟ.
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ20: ರಾಜಕೀಯ ಒತ್ತಡ ದಿಂದ ಜಿಂದಾಲ್ ಗೆ ನೀರು ಹರಿಸಲು ಮುಂದಾದರೆ ಹೋರಾಟಕ್ಕೆ ಮುಂದಾಗುವುದಾಗಿ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಕುರಿತು ಬುಧವಾರ ಪತ್ರಿಕಾಭವನದಲ್ಲಿ ಸುದ್ಧಿ ಗೋಷ್ಠಿಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಕಡ್ಡಾಯವಾಗಿ ಬಿಡಬೇಕಾದ ನೀರು ಸಹ ಲಭ್ಯತೆ ಕಡಿಮೆಯಾಗಿದ್ದು ಕುಡಿಯುವ ನೀರು, ರಾಯ, ಬಸವ ಹಾಗೂ ತುರ್ತಾ ಕಾಲುವೆಯ ಕಡಿತಗೊಳಿಸಿದ್ದು ಒಂದಡೆಯಾದರೆ ನ್ಯಾಯಾಲಯದ ಆದೇಶ ಇದ್ದರೂ ನೀರಿನ ಲಭ್ಯತೆ ಇಲ್ಲಾ ಎಂದು ಕಿರ್ಲೋಸ್ಕರ್ ಕಂಪನಿಯವರಿಗೆ ನೀಡದ ನೀರು ಇದೀಗ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಒತ್ತಡದ ಮಾಡಿ ಜಲಸಂಪನ್ಮೂಲ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಆದೇಶ ನೀಡುವ ಮೂಲಕ ನೀರುಪಡೆಯಲು ಮುಂದಾಗಿದೆ, ಜಲ ಸಂಪನ್ಮೂಲ ಇಲಾಖೆಯ ಸಹ ಜಾಣ ನಡೆಯನ್ನು ಅನುಸರಿಸುವ ಮೂಲಕ ನೀರು ಬಿಡಲು ಸಹ ಮುಂದಾಗಿದ್ದು ಅಕ್ಷಮ್ಯವಾಗಿದೆ ಸದ್ಯ ನೀರು ಬಿಡಲು ಮುಂದಾಗಿದೆ ಇದನ್ನು ನಿಲ್ಲಿಸಬೇಕು, ರಾಜಕೀಯಕ್ಕೆ ಒಳಗಾಗದೆ, ನೀರು ಬಿಡಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತಾ ಈ ಕುರಿತು 22ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು ಅಲ್ಲದೆ ಕ್ರಮಕ್ಕೆ ಮುಂದಾಗದಿದ್ದರೆ ನೀರು ತಡೆದು ಪ್ರತಿಭಟಿಸುವುದಾಗಿ ತಿಳಿಸಿದರು.
ರೈರ ಸಂಘದ ರಾಜ್ಯ ಕಾರ್ಯದರ್ಶಿ ಗೋಣಿ ಬಸಪ್ಪ, ಘಂಟಿ ಸೋಮಶೇಖರ, ಗುಜ್ಜಲ ಗಣೇಶ, ಖಲಂದರ ಸೇರಿದಂತೆ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.
One attachment • Scanned by Gmail