ಲೋಕಸಭಾ ಚುನಾವಣೆ ಸುಗಮವಾಗಿ ನಡೆಸಲು ಕ್ರಮ
ನವಲಗುಂದ,ಮಾ.20: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಸುಗಮವಾಗಿ ನಡೆಸಲು ಸಂಬಂಧಿಸಿದ ಕ್ರಮಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ದೇವರಾಜ.ಆರ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯ ಹಿನ್ನಲೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 2ಲಕ್ಷ 11ಸಾವಿರ ಮತದಾರರಿದ್ದು, 234 ಮತಗಟ್ಟೆಗಳಿವೆ, 23 ಸೆಕ್ಟರ್ ಅಧಿಕಾರಿಗಳಿದ್ದು , ಈಗಾಗಲೇ ಎಲ್ಲ ಮತಗಟ್ಟೆ ಕೇಂದ್ರಗಳ ವೀಕ್ಷಣೆ ಮಾಡಲಾಗಿದೆ ಮತಕೇಂದ್ರ ಗಳಲ್ಲಿನ ಸಣ್ಣಪುಟ್ಟ ರಿಪೇರಿ ಕೆಲಸ ಮಾಡಿಸಲು ಸೂಚಿಸಲಾಗಿದೆ.
ಮತದಾನದಿನ ಎಲ್ಲ ಮತಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಹಾಗೂ ಇತರೆ ಸೌಲಭ್ಯಗಳು ಕುರಿತು ಅಧಿಕಾಗಳೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದೆ ಜೊತೆಗೆ ಮತದಾನ ಮಾಡಲು ಬರುವ ಮತದಾರರಿಗೆ ಅನುಕೂಲವಾಗುವಂತೆ ನೆರಳಿಗಾಗಿ ಪೆಂಡಾಲ್ ವ್ಯವಸ್ಥೆಯನ್ನು ಮಾಡಲಾಗುವುದು. ಯಾವುದಾದರೂ ಮತಗಟ್ಟೆಯಲ್ಲಿ ಸೌಕರ್ಯಗಳು ಇಲ್ಲದಿದ್ದರೆ ಕೂಡಲೇ ಮಾಡಿಸುವಂತೆ ಸೂಚನೆ ನೀಡಲಾಗಿದೆ.
ಚುನಾವಣೆ ಕರ್ತವ್ಯದ ಬಗ್ಗೆ ಎಲ್ಲ ಅಧಿಕಾರಿಗಳಿಗೂ ಮಾಹಿತಿ ಇರುವುದರಿಂದ ಯಾವುದೇ ಲೋಪವಾಗದಂತೆ ತಮಗೆ ವಹಿಸುವ ಕರ್ತವ್ಯ ನಿರ್ವಹಿಸಬೇಕು ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3 ಚಕ್ ಪೆÇೀಸ್ಟ್ ಗಳನ್ನು ತೆರೆಯಲಾಗಿದ್ದು, 3 ಟೀಮ್ ಅಧಿಕಾರಿಗಳನ್ನ ನೇಮಿಸಿಲಾಗಿದೆ.
ದಿನದ 24 ಗಂಟೆ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
ಅನುಮತಿಇಲ್ಲದ ರಾಜಕೀಯ ಬ್ಯಾನರ್, ಪೆÇೀಸ್ಟರ್ ಕಂಡುಬಂದಲ್ಲಿ ಕೂಡಲೇ ತೆರವುಗೋಳಸಿ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಲು ಛಿಗಿIಉIಐ ನಾಗರಿಕರಿಗೆ ಅಧಿಕಾರ ನೀಡುತ್ತದೆ. ಮೊಬೈಲ್ ನಲ್ಲಿ ಛಿಗಿIಉIಐ ಅಪ್ಲಿಕೇಶನ್ ಅನ್ನು ಬಳಸಿ ಅದರ ಮೂಲಕ ನಾಗರಿಕರು ಲೈವ್ ಫೆÇೀಟೋ ಅಥವಾ ವೀಡಿಯೊವನ್ನು ಮೂಲಕ ದೂರು ನೀಡಬಹುದು,
ಉಲ್ಲಂಘನೆಯ ಸಾಕ್ಷ್ಯದ ಪುರಾವೆಗಳು ಸಿಕ್ಕಲ್ಲಿ ಕೆಲವೇ ಸಮಯದಲ್ಲಿ ತೆಗೆದುಕೊಂಡ ಕ್ರಮದೊಂದಿಗೆ ಪ್ರತ್ಯುತ್ತರ ನೀಡಲಾಗುತ್ತದೆ ಎಂದರು.
ಈ ವೇಳೆಯಲ್ಲಿ ನವಲಗುಂದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಅಣ್ಣಿಗೇರಿ ತಹಸೀಲ್ದಾರ ರಾಜು ಮಾವರ್ಕರ, ಕಚೇರಿಯ ಸಿಬ್ಬಂದಿ ಇದ್ದರು.