ರಾಜ್ಯಮಟ್ಟಕ್ಕೆ ಆಯ್ಕೆ
ಬಾದಾಮಿ,ಮಾ20: ಈಚೆಗೆ ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಗಲಕೋಟ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳ ವಿಭಾಗದಲ್ಲಿ ಬಾದಾಮಿ ತಾಲೂಕಿನಿಂದ ಸ್ಪರ್ಧಿಸಿದ್ದ ಚಾಲುಕ್ಯ ಜಾನಪದ ಶಿಕ್ಷಕರ ಬಳಗದ ಸದಸ್ಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಾಲುಕ್ಯ ಶಿಕ್ಷಕರ ಬಳಗದ ಸದಸ್ಯರಾದ ಬಿ.ಜಿ. ರೊಟ್ಟಿ. ಬಿ.ವಾಯ್.ಗಚ್ಚನ್ನವರ, ಇಬ್ರಾಹಿಂಸಾಬ ಕಾಖಂಡಕಿ, ಬಿ.ಎನ್.ಬಸರಿ, ಸಹಶಿಕ್ಷಕಿ ಜಯಶ್ರೀ. ಜೆ. ಜುಮ್ಮನಗೌಡ್ರ, ಶ್ರೀಶೈಲ ಹಡಪದ ಯಲ್ಲಪ್ಪ ವಾಯ್.ಹಾವರಗಿ, ಸಹಶಿಕ್ಷಕಿಯರಾದ ಡಿ.ಬಿ.ಹಡಗಲಿ, ಜಯಶ್ರೀ ಆಲೂರ, ಶಂಕ್ರಮ್ಮ ಎನ್. ಕುಬಸದ ಇವರು ಜಿಲಾಮಟ್ಟದ ಜಾನಪದ ಸಮೂಹ ಗಾಯನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮತ್ತು ನಂದಿಕೇಶ್ವರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸಲಿಂಗಪ್ಪ ಜಿ. ರೊಟ್ಟಿ ಇವರು ಕ್ಲಾಸಿಕಲ್ ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದಾರೆಂದು ಸಂಗೀತ ಶಿಕ್ಷಕ ಪ್ರಭು ಚೌಕಿಮಠ ತಿಳಿಸಿದ್ದಾರೆ.