ವಾರ್ಷಿಕೋತ್ಸವ ಕಾರ್ಯಕ್ರಮ
ಲಕ್ಷ್ಮೇಶ್ವರ,ಮಾ.20: ಪಟ್ಟಣದ ಸವಣೂರು ರಸ್ತೆಯಲ್ಲಿರುವ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ 20ನೇ ವಾರ್ಷಿಕೋತ್ಸವ ಮಂಗಳವಾರ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋನಾಟಾ ಸಾಫ್ಟ್ವೇರ್ ಕಂಪನಿಯ ನಿರ್ವಾಹಕ ಉಪಾಧ್ಯಕ್ಷರಾದ ಶ್ರೀಕರ್ ರೆಡ್ಡಿ ಅವರು ಜಗತ್ತಿನಲ್ಲಿಯೇ ಸಂಬಳದ ಮೂಲಕ ಕೂಡಿಟ್ಟ ಹಣದಿಂದ ಸಂಸ್ಥೆಯನ್ನ ತೆಗೆದ ಉದಾಹರಣೆ ಎಲ್ಲಿಯೂ ಇಲ್ಲ ಅದು ಲಕ್ಷ್ಮೇಶ್ವರದ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ದೇಶದಲ್ಲಿ ಕೇವಲ ಎರಡು ಮೂರು ಪ್ರತಿಷ್ಠಿತ ಕಂಪನಿಗಳು ಇದ್ದವು ಇಂದು ಸಾವಿರಾರು ಕಂಪನಿಗಳು ಹುಟ್ಟಿಕೊಂಡಿದ್ದು ಇಂಜಿನಿಯರಿಂಗ್ ಪಡೆದ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯ ಮತ್ತು ಆಧುನಿಕ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ ಇವುಗಳನ್ನು ಬಳಸಿಕೊಂಡು ಕೇವಲ ನೌಕರರಾಗದೆ ಕಂಪನಿಯ ಮಾಲೀಕರಾಗಲು ಒಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ್ ಅಗಡಿಯವರು ಮಾತನಾಡಿ ಇಂದು ಸಂಸ್ಥೆ ಇಷ್ಟು ಹೆಮ್ಮರವಾಗಿ ಬೆಳೆಯಲು ಸಂಸ್ಥೆಯ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ ಪ್ರಾಮಾಣಿಕತನ ಪರಿಶ್ರಮ ಕಾರಣವಾಗಿವೆ ಎಂದು ಪ್ರಶಂಶಿಸಿದ ಅವರು ತಾವು ಸಂಸ್ಥೆಯಲ್ಲಿ ಒಂದು ಕೋಟಿ ರೂ ಅನುದಾನವನ್ನು ನೀಡುತ್ತಿದ್ದು ಯಾವುದೇ ವಿಭಾಗದ ವಿದ್ಯಾರ್ಥಿಗಳು ಮುಂದೆ ಬಂದು ಕ್ರಿಯಾಯೋಜನೆ ಸಿದ್ಧಪಡಿಸಿ ಕಂಪನಿ ಆರಂಭಿಸಲು ಮುಂದಾದರೆ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಗೀತಾ ಎಚ್ ಅಗಡಿ ಪ್ರಾಚಾರ್ಯರಾದ ಪರಶುರಾಮ ಬಾರ್ಕಿ ಶಿ ಶಿರ ದೇಸಾಯಿ ರಾಜಶೇಖರ್ ಮೂಲಿಮನಿ ಎನ್. ಹಯವದನ ಇದ್ದರು.
ಕಾರ್ಯಕ್ರಮವನ್ನು ಡಾ. ಸ್ವಪ್ನ ಚನ್ನೇಗೌಡ ರ ದಿವ್ಯಶ್ರೀ ಹಡಗಲಿ ನಿಶಾ ಎಣ್ಣೆ ರಕ್ಷಿತಾ ಕುಂದಗೋಳ ನಿರ್ವಹಿಸಿದರು.