ಮಹಿಳಾ ಸಾಧಕರಿಗೆ ಜೆಸಿಐ ಭಾವನಾದಿಂದ ಸನ್ಮಾನ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮಾ.೨೦; ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮುನ್ನಡೆಯುತ್ತಿದ್ದು, ಉನ್ನತ ಸ್ಥಾನಗಳಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಅನಿಷ ಖಾತರಿಕಿ ಹೇಳಿದರು.ಜೆಸಿಐ ಶಿವಮೊಗ್ಗ ಭಾವನಾದ ವತಿಯಿಂದ ಆಯೋಜಿಸಿದ್ದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಮ್ಮೂರಿನ ಸಾಧಕಿಯರಿಗೆ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.ದೇಶದ ಮೊದಲ ಮಹಿಳಾ ಸಿನಿಯರ್ ಚೇಂಬರ್ ಭಾವನಾ ಇಂಟರನ್ಯಾಷನಲ್ ಸ್ಥಾಪಕ ಅಧ್ಯಕ್ಷೆ, ಮೊದಲ ಮಹಿಳಾ ರಾಷ್ಟ್ರೀಯ ಉಪಾಧ್ಯಕ್ಷೆ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯನ್ನು ಮಾಡುತ್ತಿರುವ ಪುಷ್ಪ ಶೆಟ್ಟಿ, ಕಲಾರಂಗದಲ್ಲಿ 30 ವರ್ಷಗಳಿಂದ ನಿರೂಪಕಿ, ಬರಹಗಾರ್ತಿ, ಹಾಡುಗಾರ್ತಿ, ಯೋಗ ಶಿಕ್ಷಕಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಕಲಾವಿದರ ಸಂಘದ ಸದಸ್ಯೆಯಾಗಿ ಕಲಾ ಸೇವೆ ಮಾಡುತ್ತಿರುವ ಶಾಂತಾ ಎಸ್ ಶೆಟ್ಟಿ  ಹಾಗೂ 25 ವರ್ಷಗಳಿಂದ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಧಾ.ಟಿ.ಜಿ. ಅವರನ್ನು ಗುರುತಿಸಿ ಗೌರವಿಸಲಾಯಿತು.ಜೆಸಿಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷೆ ಶರವಣ, ವಲಯ ಅಧ್ಯಕ್ಷ ಚನ್ನವಿರೇಶ್, ಐಪಿಜಡ್‌ಪಿ ಅನುಷ್ ಗೌಡ ಅವರು ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜೆಸಿಐ ವಲಯ 24 ಜಡ್‌ಜಿಬಿ ತಂಡ ಹಾಗೂ ಶಿವಮೊಗ್ಗ ಭಾವನದ ಐಪಿಪಿ ಜೆಸಿ ಪೂರ್ಣಿಮಾ ಸುನಿಲ್, ಕಾರ್ಯದರ್ಶಿ ವಂದನ ದಿನೇಶ್ ಹಾಗೂ ಘಟಕದ ಎಲ್ಲಾ ಹಿರಿಯರು ಸದಸ್ಯರುಗಳು ಭಾಗವಹಿಸಿದ್ದರು.