ಕಲ್ಯಾಣ ಕರ್ನಾಟಕದ ಯುವತಿಯ ಸಾಧನೆ ಮಹತ್ವದ ಬೆಳವಣಿಗೆ
ಕಲಬುರಗಿ :ಮಾ.20: ಕಲ್ಯಾಣ ಕರ್ನಾಟಕ ಕೇವಲ ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿನ ಪ್ರತಿಭೆಗಳು ಕ್ರೀಡೆಯಲ್ಲಿಯೂ ಸೈ ಎನ್ನಿಸಿಕೊಳ್ಳುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಜರುಗಿದ (ಸಾಜ್-ಈ-ಹಿಂದ್) 6ನೇ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರೀಯ “ಖವ್ವಾಲಿ” ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಉಪನ್ಯಾಸಕರು ಹಾಗೂ ಪಾಲಕರು ಪ್ರೇರಣೆ ನೀಡಬೇಕು. ಇದರಿಂದ ಅವರ ಮನೋದೈಹಿಕ ಬೆಳವಣಿಗೆ ಹಾಗೂ ಆತ್ಮವಿಶ್ವಾಸ ತುಂಬಲು ಸಹಕಾರಿ. ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಶಕ್ತಿಯಾಗಿ ನಿಲ್ಲುತ್ತವೆ. ರಾಯಲ್ ಚಾಲೆಂಜ್ ಕ್ರಿಕೆಟ್ ಟೀಮ್ ಸಾಧನೆ ಮಾಡಿ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕು. ಶ್ರೇಯಾಂಕ ಪಾಟೀಲ್ ಈ ಭಾಗದ ಯುವಕರಿಗೆ ಸ್ಫೂರ್ತಿ ಜೊತೆಗೆ ಪ್ರೇರಣೆ ಆಗಿದ್ದಾರೆ. ಅವರ ಸಾಧನೆ ಯುವಕರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪೆÇ್ರ. ಕೆ ಲಿಂಗಪ್ಪ ಮಾತನಾಡಿ ಎರಡು ದಿನಗಳ ಖವ್ವಾಲಿ ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಚಂಡೀಗಢ, ಹರಿಯಾಣ ಹಾಗೂ ಮಧ್ಯಪ್ರದೇಶ ರಾಜ್ಯಗಳ ಹತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಕಲಾವಿದರು ಭಾಗವಹಿಸಿದ್ದರು. ಇದರಲ್ಲಿ 56 ವಿದ್ಯಾರ್ಥಿಗಳು, 44 ವಿದ್ಯಾರ್ಥಿನಿಯರು, 27 ಸಹ ಕಲಾವಿದರು ಮತ್ತು 17 ತಂಡದ ಮ್ಯಾನೇಜರ್‍ಗಳು ಸೇರಿದಂತೆ ಒಟ್ಟು 141 ಸದಸ್ಯರು ಭಾಗವಹಿಸಿದ್ದರು. ಪ್ರದರ್ಶನದಲ್ಲಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ಸದಭಿರುಚಿಯ ಖವ್ವಾಲಿ ಹಾಡುಗಳ ಹಾಡಿ ರಂಜಿಸಿದರು. ಈ ರಾಷ್ಟ್ರೀಯ ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘಕ್ಕೆ ಕೃತಜ್ಞತೆ ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿ ತೀರ್ಪುಗಾರರ ಮತ್ತು ಪ್ರೇಕ್ಷಕರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸ್ಪರ್ಧೆಯನ್ನು ಯಶಸ್ವಿಗೆ ಸಹಕರಿಸಿದ ಉಪಸಮಿತಿಗಳ ಸರ್ವರಿಗೂ ಧನ್ಯವಾದ ತಿಳಿಸಿ ಕಾರ್ಯಕ್ರಮ ವರದಿ ವಾಚಿಸಿದರು.
ವಿಜೇತ ತಂಡಗಳ ವಿವರ :
ಚಂಡಿಘರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲಾವಿದರು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಗಳಿಸಿ 25 ಸಾವಿರ ನಗದು ಬಹುಮಾನ ಪಡೆದರೆ, ಡಾ. ಹರಿಸಿಂಗ್ ಗೌರ್ ಕೇಂದ್ರೀಯ ವಿಶ್ವವಿದ್ಯಾಲಯ ದ್ವಿತೀಯ ಸ್ಥಾನ ಪಡೆದು 20 ಸಾವಿರ ನಗದು ಸ್ವೀಕರಿಸಿದರೆ, ಗುಜರಾತಿನ ಪಾರುಲ್ ವಿಶ್ವವಿದ್ಯಾಲಯ ಮೂರನೇ ಸ್ಥಾನ ಗಳಿಸಿ 15 ಸಾವಿರ ನಗದು, ಸಂತ ಗಾಡ್ಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯ ಹಾಗೂ ಚೌದ್ರಿ ಬನ್ಸಿಲಾಲ್ ವಿಶ್ವವಿದ್ಯಾಲಯ ತೃಪ್ತಿದಾಯಕ ಸ್ಥಾನ ಪಡೆದುಕೊಂಡವು. ಅತಿಥಿ ಗಣ್ಯರು ತಂಡದ ಎಲ್ಲಾ ಕಲಾವಿದರಿಗೆ ನಗದು ಬಹುಮಾನ ವಿತರಿಸಿ ಅಭಿನಂದಿಸಿದರು. ತಂಡದ ವ್ಯವಸ್ಥಾಪಕರಿಗೆ ನೆನೆಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯೆ ರಾಘವೇಂದ್ರ ಎಮ್ ಭೈರಪ್ಪ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ. ಕೆ. ವಿಜಯಕುಮಾರ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪೆÇ್ರ. ಕೆ. ಲಿಂಗಪ್ಪ, ಪೆÇ್ರ. ಪರಿಮಳ ಅಂಬೇಕರ್ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿ ಕಲಾವಿದರು, ಸಹ ಕಲಾವಿದರು, ತಂಡದ ವ್ಯವಸ್ಥಾಪಕರು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದಿ ವಿಭಾಗದ ಮುಖ್ಯಸ್ಥೆ ಪೆÇ್ರ. ಪರಿಮಳ ಅಂಬೇಕರ್ ಕಲಾ ನಿಕಾಯದ ಡೀನ್ ಪೆÇ್ರ. ಅಬ್ದುಲ್ ರಬ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.